ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಹಳೆಯಂಗಡಿ, ಪಕ್ಷಿಕೆರೆ, ಅತಿಕಾರಿಬೆಟ್ಟು, ಕಟೀಲು ಪರಿಸರದಲ್ಲಿ ಇಂದು ಮಧ್ಯಾಹ್ನದ ಬಳಿಕ ಮಳೆಯಾಗಿದ್ದು, ಕೆಲವೆಡೆ ಕೃತಕ ನೆರೆ ಭೀತಿ ಎದುರಾಗಿದೆ.
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗಿರಲಿಲ್ಲ.
ಆದರೆ, ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಏಕಾಏಕಿ ಬಿರುಸಿನ ಮಳೆಯಾಗಿದೆ.
ಭಾರಿ ಮಳೆಯಿಂದಾಗಿ ಭಾನುವಾರ ದಿನದ ಸಭೆ ಸಮಾರಂಭಗಳಿಗೆ ತೊಂದರೆಯಾಯಿತು. ಬಪ್ಪನಾಡು ದೇವಸ್ಥಾನದ ಪ್ರಾಂಗಣದೊಳಗೆ ಮಳೆನೀರು ತುಂಬಿಕೊಂಡಿದೆ.
ಮುಲ್ಕಿ ಬಸ್ ನಿಲ್ದಾಣ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿಯೇ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಹಲವೆಡೆ ಕೃಷಿ ಹಾನಿಯಾಗಿದ್ದು, ಕರಾವಳಿ ಜಿಲ್ಲೆಗಳ ನಾನಾ ಕಡೆಯೂ ಇದೀಗ ಮಳೆಯಾಗುತ್ತಿದೆ.
Kshetra Samachara
14/11/2021 05:22 pm