ವರದಿ: ರಹೀಂ ಉಜಿರೆ
ಮಲ್ಪೆ ;ದೇಶದಲ್ಲೇ ಪ್ರಸಿದ್ಧಿ ಪಡೆದ ಪ್ರವಾಸಿಗರ ಮೆಚ್ಚಿನ ತಾಣ ಸೈಂಟ್ ಮೇರಿಸ್ ದ್ವೀಪ..ಇಂತಹ ಸೈಂಟ್ ಮೇರಿಸ್ ದ್ವೀಪವೀಗ ಬಲು ದುಬಾರಿ ಆಗಿ ಪರಿಣಮಿಸಿದೆ. ದರ ಹೆಚ್ಚಳದಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರು ದಡದಿಂದಲೇ ಐಲ್ಯಾಂಡ್ ನೋಡಿ ಹೋಗುವಂತಾಗಿದೆ!
ಕರಾವಳಿ ಜಿಲ್ಲೆಗಳಲ್ಲಿ ಹಲವಾರು ಬೀಚ್ ಗಳಿದ್ದರೂ ಪ್ರವಾಸಿಗರಿಗೆ ಮುಕ್ತವಾಗಿರುವ ದ್ವೀಪ,ಸೈಂಟ್ ಮೇರೀಸ್ ಒಂದೇ. ಉಡುಪಿಯ ಮಲ್ಪೆಯಿಂದ ಆರು ಕಿಲೋಮೀಟರ್ ದೂರದಲ್ಲಿ ಇರೋ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗ್ಬೇಕು ಎಂಬ ಆಸೆ ಸಹಜ. ಆದರೀಗ ದ್ವೀಪಕ್ಕೆ ಹೋಗುವ ಬೋಟ್ ಗಳ ದರ ಮಾತ್ರ ಬಲು ದುಬಾರಿ ಆಗಿ, ಪ್ರವಾಸಿಗರಿಗೆ ಬಿಸಿ ತುಪ್ಪವಾಗಿವಾಗಿದೆ. ಕಳೆದ ಬಾರಿ ಸೀವಾಕ್ ನಿಂದ ದ್ವೀಪಕ್ಕೆ 250 ಇತ್ತು. ಈ ಬಾರಿ 300 ರಷ್ಟು ಟಿಕೆಟ್ ದರ ಇದೆ. ಇನ್ನು ಮಲ್ಪೆ ಬೀಚ್‌ನಿಂದ ಹೋಗುವವರಿಗೆ 400 ರೂ ಚಾರ್ಜ್! ಇದರ ಜೊತೆಗೆ ವಾಹನ ಪಾರ್ಕ್ ಮಾಡುವುದಕ್ಕೂ ಹಣ ನೀಡುವ ಅನಿವಾರ್ಯತೆ ಪ್ರವಾಸಿಗರದ್ದು.
3 ವರ್ಷದಿಂದ 10 ವರ್ಷದ ಮಕ್ಕಳಿಗೆ ಸ್ಪಲ್ಪ ರಿಯಾಯಿತಿ ಹೊರತು ಪಡಿಸಿದರೆ ಎಲ್ಲರಿಗೂ ಒಂದೇ ರೇಟ್.
ಇಷ್ಟು ಹಣ ಕೊಟ್ಟು ಐಲ್ಯಾಂಡ್ ಗೆ ಬಂದರೂ ಕೇವಲ 1 ಗಂಟೆ ಮಾತ್ರ ನಿಲ್ಲೋಕೆ ಅವಕಾಶ ನೀಡಲಾಗುತ್ತಿದೆ. ಇನ್ನು ದ್ವೀಪಕ್ಕೆ ಹೊರಗಿನಿಂದ ಏನೂ ಒಯ್ಯುವಂತಿಲ್ಲ.ಅದನ್ನು ಅಲ್ಲೇ ಕೊಂಡುಕೊಳ್ಳಬೇಕೆಂಬ ನಿಯಮ ಇದೆ.ಅದಕ್ಕೂ ದುಬಾರಿ ರೇಟ್.ಹೀಗಾಗಿ ಫ್ಯಾಮಿಲಿ ಇಲ್ಲಿಗೆ ಬರುವುದಾದರೆ ಸಾವಿರಾರು ರೂಗಳು ಜೇಬಲ್ಲಿರಲೇಬೇಕು
ಕೊರೋನಾ ಕಾರಣದಿಂದ ಆರ್ಥಿಕವಾಗಿ ಕುಗ್ಗಿರುವ ಜನ ಐಲ್ಯಾಂಡ್ ಗೆ ಹೋಗಿ ಒಂದಷ್ಟು ಹೊತ್ತು ನೆಮ್ಮದಿಯಿಂದ ಇದ್ದು ಬರೋಣ ಅಂದರೆ ದುಬಾರಿ ದರದಿಂದ ಸಾಧ್ಯ ಆಗ್ತಾ ಇಲ್ಲ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾಗಿದೆ.
Kshetra Samachara
27/10/2021 04:04 pm