ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗುಡುಗು ಮಿಂಚು ಸಹಿತ ಭಾರಿ ಮಳೆ; ರಸ್ತೆ ತುಂಬಿದ ನೀರು, ಪವರ್ ಕಟ್

ಉಡುಪಿ: ಉಡುಪಿಯಲ್ಲಿ ಇಂದು ಕೂಡ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಕೆಲವು ದಿನಗಳಿಂದ ರಾತ್ರಿ ವೇಳೆ ಮಳೆಯಾಗುತ್ತಿದ್ದು, ಇವತ್ತು‌ ಕೂಡ ಭಾರಿ ಮಳೆಯಾಗಿ ತಗ್ಗುಪ್ರದೇಶಗಳಲ್ಲಿ ನೀರು ನಿಂತಿದೆ.

ನಗರದ ಸಿಟಿ ಸೆಂಟರ್ ಎದುರು ಸರಾಗವಾಗಿ ಮಳೆ ನೀರು ಹೋಗಲು ಸ್ಥಳವಿಲ್ಲದೆ ರಸ್ತೆಯಲ್ಲೇ ನೀರು ತುಂಬಿದೆ. ಇದರಿಂದಾಗಿ ಈ ಭಾಗವಾಗಿ ಸಂಚರಿಸುವ ಪಾದಚಾರಿಗಳು ಮತ್ತು ವಾಹನ‌ ಸವಾರರಿಗೆ ತೊಂದರೆಯುಂಟಾಯಿತು. ಗುಡುಗು ಸಹಿತ ಮಳೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿ ಜನರು ಕತ್ತಲಲ್ಲೇ ಕಳೆಯುವಂತಾಗಿದೆ.

ಸದ್ಯದ ವಾತಾವರಣ ಗಮನಿಸಿದರೆ ರಾತ್ರಿ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ‌ ಇಲಾಖೆ ಇವತ್ತು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದರೂ ಹಗಲು ಹೊತ್ತು ಮಳೆಯಾಗಿರಲಿಲ್ಲ.

Edited By : Nagesh Gaonkar
Kshetra Samachara

Kshetra Samachara

21/10/2021 09:50 pm

Cinque Terre

24.25 K

Cinque Terre

0

ಸಂಬಂಧಿತ ಸುದ್ದಿ