ಮೂಡುಬಿದಿರೆ: ಇರುವೈಲು ಮತ್ತು ಕಿಲೆಂಜಾರು ಗ್ರಾಮದ ಗಡಿ ಪ್ರದೇಶ ಕೊಲ್ಲಾಯ್ ಕೊಡಿ ಎಂಬಲ್ಲಿ ಹಂದಿಗೆ ಇಟ್ಟಿದ್ದ ಉರುಳಿಗೆ ಸಿಲುಕಿದ ಚಿರತೆಯೊಂದನ್ನು ಅರಣ್ಯ ಇಲಾಖೆ ಮತ್ತು ಪೊಲೀಸರು ಸತತ ಎರಡುವರೆ ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಕೊಲ್ಲಾಯ್ ಕೊಡಿಯಲ್ಲಿ ಪಲ್ಗುಣಿ ನದಿ ಬಳಿ ಶನಿವಾರ ಚಿರತೆ ಉರುಳಿಗೆ ಸಿಲುಕಿ ಒದ್ದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಮೂಡುಬಿದಿರೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ವೈದ್ಯಕೀಯ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸರು ಪೊದೆಯೊಳಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಗೆ ಅರಿವಳಿಕೆ ನೀಡಲು ಮಾಡಿದ ಮೊದಲ ಪ್ರಯತ್ನ ವಿಫಲವಾಯಿತು. ನಂತರ 2ನೇ ಬಾರಿ ಚಿರತೆ ಮೇಲೆ ಬಲೆ ಹಾಕಿ 2ನೇ ಬಾರಿ ಚುಚ್ಚುಮದ್ದು ನೀಡುವ ಪ್ರಯತ್ನದಲ್ಲಿ ವೈದ್ಯರು ಯಶಸ್ವಿಯಾದರು.
ಗಿಡಗಂಟಿಗಳ ನಡುವೆ ಅಲ್ಯೂಮಿನಿಯಂ ತಂತಿಯಿಂದ ಮಾಡಲ್ಪಟ್ಟಿರುವ ಉರುಳಿನಲ್ಲಿ ಸಿಲುಕಿದ್ದ ಚಿರತೆಯನ್ನು ಅಪಾಯವಿಲ್ಲದಂತೆ ಬಿಡಿಸಿ, ಬೋನಿಗೆ ಸ್ಥಳಾಂತರಿಸಿ ಮೂಡುಬಿದಿರೆಗೆ ಸಾಗಿಸಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳಾದ ಹಿಮಗಿರಿ ಅಂಗಡಿ, ಸತೀಶ್ ಸಿಬ್ಬಂದಿ ಅಶ್ವಿತ್, ಡಾ.ಯಶಸ್ವಿ ನಾರಾವಿ, ಡಾ.ಪ್ರಥ್ವಿ, ಮೂಡುಬಿದಿರೆ ಠಾಣೆ ಎಎಸ್ಐ ಕಾಂತಪ್ಪ, ಸಿಬ್ಬಂದಿ ರಾಮು, ಜಾಹೀದ್, ಮಾಧವ, ಪ್ರಶಾಂತ್, ರಮೇಶ್ ಕಾರ್ಯಾಚರಣೆಯಲ್ಲಿದ್ದರು.
Kshetra Samachara
16/10/2021 05:20 pm