ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ಈ ಋತುವಿನ ಯಾಂತ್ರೀಕೃತ ಸಮುದ್ರ ಮೀನುಗಾರಿಕೆ ಆರಂಭವಾಗಿ ಇದೀಗ ಎರಡು ತಿಂಗಳುಗಳೇ ಕಳೆದಿವೆ. ಈ ಅವಧಿಯಲ್ಲಿಉತ್ತಮ ಮೀನುಗಾರಿಕೆಯಾಗಿದ್ದು,ಇದರಿಂದಾಗಿ ಮೀನುಗಾರರ ಮೊಗ ಮೊರದಗಲವಾಗಿದೆ. ಕಳೆದ ಋತುವಿನಲ್ಲಿ ಕೊರೊನಾ ಅಟ್ಟಹಾಸ, ಚಂಡಮಾರುತದ ಅಬ್ಬರದಿಂದಾಗಿ ಮೀನುಗಾರಿಕೆ ಕ್ಷೇತ್ರ ಅಕ್ಷರಶಃ ತತ್ತರಿಸಿಯೇ ಹೋಗಿತ್ತು. ಆದರೆ, ಈ ವರ್ಷದ ಮತ್ಸ್ಯಗಾರಿಕೆಯ ಆರಂಭದಲ್ಲೇ ಭರಪೂರ ಮೀನು ಸಿಕ್ಕಿದೆ.
ಮೀನು ಸುಗ್ಗಿಯಿಂದಾಗಿ ಮೀನುಗಾರರ ಹಿಗ್ಗಿನ ಜೊತೆಗೆ ಮತ್ಸ್ಯಪ್ರಿಯರಿಗೆ ಅಗ್ಗದ ದರದಲ್ಲಿ ನಾನಾ ಮೀನುಗಳು ಲಭ್ಯವಾಗುತ್ತಿವೆ. ಇದರಿಂದ ಮೀನುಗಾರಿಕೆಯನ್ನೇ ಪರೋಕ್ಷವಾಗಿ ನಂಬಿರುವ ಜನರೂ ಸಂಭ್ರಮದಲ್ಲಿದ್ದಾರೆ. ಮೀನು ದಕ್ಕೆಯ ಪರಿಸರದಲ್ಲಿರುವ ಮಂಜುಗಡ್ಡೆ ಸ್ಥಾವರಗಳು, ಹೋಟೆಲ್- ಅಂಗಡಿಗಳು, ಫಿಶ್ ಕಟ್ಟಿಂಗ್, ಏಲಂದಾರರು, ಸಾರಿಗೆ ವಲಯದ ಮಂದಿ, ವ್ಯಾಪಾರಿಗಳು, ಕಾರ್ಮಿಕರಿಗೆ ಒಳ್ಳೆಯ ಸಂಪಾದನೆಯಿದ್ದು, ಖುಷಿಯ ಮೂಡ್ ನಲ್ಲಿದ್ದಾರೆ.
Kshetra Samachara
04/10/2021 01:14 pm