ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪರ್ಕಳದ ದೇವಿನಗರದಲ್ಲಿ ಶಂಖ ಆಕೃತಿಯ ಹುಳಗಳ ಬಾಧೆ

ಉಡುಪಿ: ಅ.3: ಪರ್ಕಳ ಇಲ್ಲಿನ ದೇವಿನಗರದ, ಆಸುಪಾಸಿನ ಹೆಚ್ಚಿನ ಎಲ್ಲಾ ಮನೆಗಳಲ್ಲಿ ಶಂಖಾಕೃತಿಯ ಹೋಲುವ ವಿಶಿಷ್ಟ ವಾದಂತಹ ಹುಳಗಳ ರಾಶಿರಾಶಿ ಹಿಂಡು ಹಿಂಡು ಕಂಡುಬಂದಿದೆ.ಸ್ಥಳೀಯ ದೇವಿನಗರದ ನಿವಾಸಿಗಳಾದ, ಉದಯಕುಮಾರ್, ಸರಸ್ವತಿ, ದಿಲ್ ಶಾದ್, ಅಬುಬಕರ್,ನಿಹಾಲ್ ಹೋಟೆಲ್ ಮಂದಾರ, ಸುತ್ತಮುತ್ತ, ಯಥೇಚ್ಛವಾಗಿ ಈ ರೀತಿಯ ಹುಳಗಳು ಕಾಣಸಿಗುತ್ತದೆ.

ನಗರ ಪ್ರದೇಶದ ವ್ಯಾಪ್ತಿಯೊಳಗೆ, ಮನೆಗಳಗೋಡೆ, ತೆಂಗಿನಮರ, ಗಿಡಗಳ ಮಧ್ಯೆ, ಮನೆಯ ಆವರಣದ ಗೋಡೆಗಳಲ್ಲಿರಾಶಿ ರಾಶಿ ಹುಳಗಳು ಹರಿಯಲಾರಂಭಿಸಿ, ಎಲ್ಲರ ಮನೆಯ ಒಳಗೆ ಸಂಚರಿಸಿ, ತೊಂದರೆ ಉಂಟು ಮಾಡುತ್ತಿದೆ. ದೇವಿ ನಗರದ ಕೆಲವೊಂದು ಪ್ರದೇಶವು ನಗರಸಭೆಯ ವ್ಯಾಪ್ತಿ ಹೊಂದಿದ್ದು ಹಾಗೂ ಕೆಲವೊಂದು ಪ್ರದೇಶ ಪಂಚಾಯಿತಿಗೆ ಒಳಪಟ್ಟಿದ್ದು, ಈ ಪ್ರದೇಶದಲ್ಲಿ ವಾಸಮಾಡುವ ನಾಗರಿಕರಿಗೆ ಈ ಹುಳ ಬಾಧೆಯಿಂದ ತೊಂದರೆಉಂಟಾಗಿದೆ.

ಇದರಿಂದ ತಪ್ಪಿಸಲು ಸೂಕ್ತವಾದ ಕ್ರಮವನ್ನು ನಗರಸಭೆ ಹಾಗೂ ಪಂಚಾಯ್ತಿಯ ವ್ಯಾಪ್ತಿಗೆ ಒಳಪಟ್ಟ ಆರೋಗ್ಯ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ, ಬಾಧೆಗೆ ಸಂಬಂಧಿಸಿದ ಮದ್ದನ್ನು ಸಿಂಪಡಿಸಿ, ಹುಳ ಬಾಧೆಯಿಂದ ಮುಕ್ತಿ ದೊರೆಕುವಂತೆ ಶೀಘ್ರ ಕ್ರಮ ಕೈಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರುಗಳಾದ ಗಣೇಶ್ ರಾಜ್ ಸರಳೇಬೆಟ್ಟು, ಹಾಗೂ ಪರ್ಕಳದ ರಾಜೇಶ್ ಪ್ರಭು,ರವರು ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ.ಈ ಹುಳಬಾಧೆಯ ಸಮಸ್ಯೆಯು ಕಳೆದ ಮೂರು ವರ್ಷದಿಂದ. ಈ ಪ್ರದೇಶದಲ್ಲಿ ಕಂಡು ಬಂದಿದ್ದು, ಈ ಬಾರಿ ಹೆಚ್ಚೆಚ್ಚು ಕಾಣಿಸಿ ತೊಂದರೆ ಉಂಟು ಮಾಡುತ್ತಿದೆ ಎಂದು ‌ದೇವಿನಗರದ ನಿವಾಸಿಗಳು ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

03/10/2021 07:36 pm

Cinque Terre

31.36 K

Cinque Terre

0

ಸಂಬಂಧಿತ ಸುದ್ದಿ