ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸೆಪ್ಟೆಂಬರ್ 25 ಗ್ರೀನ್ ವಾಕಥಾನ್' ಕಾರ್ಯಕ್ರಮ

ಮಂಗಳೂರು: ಬಿಐಟಿ ಮತ್ತು ಬೀಡ್ಸ್ ವಿಶ್ವ ಹಸಿರು ಕಟ್ಟಡ ಸಪ್ತಾಹದ ಹಿನ್ನೆಲೆಯಲ್ಲಿ 'ಗ್ರೀನ್ ವಾಕಥಾನ್' ಸೆಪ್ಟೆಂಬರ್ 25 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಿಂದ ಬಿಐಟಿ ಕ್ಯಾಂಪಸ್ ವರೆಗೆ ಆಯೋಜಿಸಲಾಗಿದೆ ಎಂದು ಬಿಐಟಿ ಪ್ರಾಂಶುಪಾಲ ಡಾ.ಎಸ್ ಐ ಮಂಜೂರು ಬಾಷಾ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಧ್ವಜಾರೋಹಣವನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಿಸಿ ಡಾ.ಪಿ.ಎಸ್.ಸುಬ್ರಹ್ಮಣ್ಯ ಯಡಪಡಿತ್ತಾಯ ನೇರವೇರಿಸಲಿದ್ದಾರೆ.

ಬೆಳಿಗ್ಗೆ 7ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಿಂದ ಪ್ರಾರಂಭಿಸಿ ವಾಲ್ಡಿಕರಿಯನ್ನು ಬಿಐಟಿ ಕ್ಯಾಂಪಸ್‌ನಲ್ಲಿ ಸೈಯದ್ ಮೊಹಮದ್ ಬ್ಯಾರಿ ಇವರಿಂದ ಸಸಿ (ಗಿಡ) ನೆಡುವುದರೊಂದಿಗೆ ನಡೆಯಲಿದೆ. ಈ ಕಾರ್ಯಕ್ರಮದ ಉದ್ದೇಶವು ಸುಸ್ಥಿರ ಅಭಿವೃದ್ಧಿ, ಇಂಧನ ಉಳಿತಾಯ, ಮರುಬಳಕೆ ಮತ್ತು ಸ್ವಚ್ಛ ಹಾಗೂ ಹಸಿರು ನಗರವನ್ನು ಉತ್ತೇಜಿಸುವ ಮೂಲಕ ಜಾಗೃತಿ ಮೂಡಿಸುವುದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಡ್ಸ್ ಪ್ರಿನ್ಸಿಪಾಲ್ ಆರ್. ಅಶೋಕ್ ಎಲ್ ಪಿ ಮಂಡೋನ್ಸಾ, ಬಿಐಟಿ-ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ಡಾ. ಅಜೀಜ್ ಮುಸ್ತಫಾ, ಬಿಐಟಿ ಮಂಗಳೂರಿನ ಇಸಿಇ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

23/09/2021 12:38 pm

Cinque Terre

7.7 K

Cinque Terre

0

ಸಂಬಂಧಿತ ಸುದ್ದಿ