ಬೆಳ್ತಂಗಡಿ: ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಕಾಡುಕೋಣಗಳು ಕಾದಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿಡ್ಲೆ ಗ್ರಾಮದ ಕರಂಬಿತ್ತಿಲು ಸುಧಾಕರ ಎಂಬವರ ತೋಟದಲ್ಲಿ ಎರಡು ಕಾಡುಕೋಣಗಳು ಕಾದಾಟ ನಡೆಸುತ್ತಿರುವ ವಿಡಿಯೋವನ್ನು ಮನೆಯವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದ ಶಿಶಿಲ ಮುಂಡಾಜೆ ಪರಿಸರದಲ್ಲಿ ಆನೆಗಳ ಹಿಂಡು ಕೃಷಿ ಹಾಳು ಮಾಡುತ್ತಿದೆ. ಅದಲ್ಲದೇ ಕಾಡು ಕೋಣಗಳ ಹಾವಳಿ ಕೂಡ ವಿಪರೀತವಾಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
Kshetra Samachara
19/09/2021 03:51 pm