ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಬಿರುಬಿಸಿಲಿನ ವಾತಾವರಣವಿದ್ದು ಬಿಸಿಲಿನ ಬೇಗೆಯಿಂದ ಜನ ಕಂಗೆಟ್ಟು ಹೋಗಿದ್ದರು. ಆದರೆ ಮಧ್ಯಾಹ್ನ ಏಕಾಏಕಿ 3 ಗಂಟೆಯಿಂದ 5 ಗಂಟೆವರೆಗೆ ಶುರುವಾದ ಭಾರಿ ಮಳೆಗೆ ಕೃತಕ ನೆರೆ ಭೀತಿ ಎದುರಾಯಿತು.
ಭಾರಿ ಮಳೆಗೆ ಕುಬೆವೂರು ರೈಲ್ವೆ ಮೇಲ್ಸೇತುವೆ ಬಳಿ ಯಿಂದ ಶಿಮಂತೂರು ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ಕೃತಕ ನೆರೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು..
ಭಾರಿ ಮಳೆಗೆ ಮುಲ್ಕಿ ಬಸ್ ನಿಲ್ದಾಣದ ಬಳಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿ ನೀರು ಹರಿಯುತ್ತಿತ್ತು.
ಮಳೆಗೆ ಕಾರ್ನಾಡು ಮುಲ್ಕಿ ಪೇಟೆಯಲ್ಲಿ ವ್ಯಾಪಾರ-ವಹಿವಾಟು ಕ್ಷೀಣಗೊಂಡಿದ್ದು ಕೊರೊನಾ ವೀಕೆಂಡ್ ಕರ್ಫ್ಯೂ ನೆನಪಿಸುತ್ತಿತ್ತು ಎಂದು ಮೀನುಗಾರ ಮಹಿಳೆಯರು ತಿಳಿಸಿದರು.
ಮುಲ್ಕಿ ಹೆದ್ದಾರಿಯಲ್ಲಿ ಅಪಘಾತ ತಡೆಗೆ ಬ್ಯಾರಿಕೇಡ್ ಗಳನ್ನು ಇರಿಸಲಾಗಿದ್ದು ಭಾರೀ ಮಳೆಗೆ ಚಾಲಕರಿಗೆ ರಸ್ತೆ ಕಾಣದೆ ವಾಹನಗಳು ಡಿಕ್ಕಿ ಹೊಡೆದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಬಳಿಕ ಸ್ಥಳೀಯ ರಿಕ್ಷಾ ಚಾಲಕರು ಸರಿಪಡಿಸಿದರು.
Kshetra Samachara
01/09/2021 09:18 pm