ಮುಲ್ಕಿ: ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಾರ್ನಾಡು ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು ಸ್ಥಳೀಯರನ್ನು ಭಯಭೀತರನ್ನಾಗಿಸಿದೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಭಾರೀ ಗಾತ್ರದ ಹೆಬ್ಬಾವು ರಾಜ್ಯ ಹೆದ್ದಾರಿ ರಸ್ತೆ ದಾಟುತ್ತಿರುವುದನ್ನು ಕಂಡು ವಾಹನ ಸವಾರರು, ಪಾದಚಾರಿಗಳು ಭಯಭೀತರಾಗಿದ್ದಾರೆ.
ಹೆಬ್ಬಾವು ಆಹಾರ ಸೇವಿಸಿ ಕೊಂಡು ಡಾಂಬರು ರಸ್ತೆಯಲ್ಲಿ ಚಲಿಸ ಲಾಗದೆ ಒದ್ದಾಡಿ ತೆವಳಿ
ಮರೆಯಾಗಿದೆ.
ಈ ಸಂದರ್ಭ ಮುಲ್ಕಿ ಮೊಬೈಲ್ ಅಂಗಡಿಯ ಮಾಲೀಕರಾದ ನಾಗರಾಜ್ ಭಟ್ ಮೊಬೈಲ್ ನಲ್ಲಿ ಭಾರಿ ಗಾತ್ರದ ಹೆಬ್ಬಾವನ್ನು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Kshetra Samachara
29/07/2021 10:48 pm