ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗರ್ಭಗುಡಿಯೊಳಗೆ ಮಲಗಿತ್ತು ನಾಗರ!; ಸುರಕ್ಷಿತ ತಾಣಕ್ಕೆ ರವಾನೆ

ಉಡುಪಿ: ನಗರದ ಕುಂಜಿಬೆಟ್ಟು ಮೀನು ಮಾರುಕಟ್ಟೆ ರಸ್ತೆ ಬಳಿ ಇರುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಗರ್ಭಗುಡಿಯೊಳಗೆ ಆಶ್ರಯ ಪಡೆದಿರುವ ನಾಗರಹಾವನ್ನು ರಕ್ಷಿಸಲಾಯಿತು.

ಅರ್ಚಕ ವಿಘ್ನೇಶ್ ಅವರು ಪೂಜೆ ನೆರವೇರಿಸಲು ಗರ್ಭಗುಡಿಯೊಳಗೆ ಪ್ರವೇಶಿಸಿದಾಗ, ನಾಗರ ಹಾವು ವಿಗ್ರಹದ ಸನಿಹ ಮಲಗಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಅರ್ಚಕರು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಕರ್ತರು, ಹಾವು ಹಿಡಿಯಲು ಪರಿಣತಿ ಹೊಂದಿರುವ ಅಂಬಾಗಿಲಿನ ಯು.ಬಿ.ನಾಗರಾಜ್ ಅವರ ಮೂಲಕ ಮೂರು ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/01/2021 03:50 pm

Cinque Terre

17.23 K

Cinque Terre

0

ಸಂಬಂಧಿತ ಸುದ್ದಿ