ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಂಗಾರಕಟ್ಟೆಯಲ್ಲಿ 30ಕ್ಕೂ ಅಧಿಕ ಮನೆಗಳು ಜಲಾವೃತ

ಹಂಗಾರಕಟ್ಟೆ: ಐರೋಡಿ ಗ್ರಾಪಂ ವ್ಯಾಪ್ತಿಯ ಹಂಗಾರಕಟ್ಟೆ ಬಾಳ್ಕುದ್ರು ಪ್ರದೇಶದ ಸುಮಾರು 30 ರಿಂದ 40 ಮನೆಗಳು ಜಲಾವೃತಗೊಂಡಿವೆ.

ಈ ಪ್ರದೇಶಗಳಿಗೆ ಐರೋಡಿ ಗ್ರಾಪಂ ಮಾಜಿ ಅಧ್ಯಕ್ಷ ವಿಠಲ್ ಪೂಜಾರಿ ಮತ್ತವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿ, ಅಲ್ಲಿಂದ ಸ್ಥಳಾಂತರಗೊಳಿಸಲು ವ್ಯವಸ್ಥೆ ಮಾಡಿದ್ದಾರೆ.

ಸದ್ಯ ಮಳೆಯ ಅಬ್ಬರ ಇಳಿಮುಖವಾಗಿದ್ದರೂ , ಇನ್ನೆರಡು ದಿನಗಳ ಕಾಲ ಮಳೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಿಸಿದೆ.

Edited By :
Kshetra Samachara

Kshetra Samachara

20/09/2020 04:29 pm

Cinque Terre

37.32 K

Cinque Terre

0

ಸಂಬಂಧಿತ ಸುದ್ದಿ