ಉಡುಪಿ: ಮಳೆ ಮತ್ತು ನೆರೆಯಿಂದ ಉಡುಪಿ ನಗರ ತತ್ತರಿಸಿದ್ದು, ನಗರ ಪ್ರದೇಶದಲ್ಲೇ ಐವತ್ತಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ನಿನ್ನೆ ರಾತ್ರಿಯೇ ಹಲವು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಈ ಮಧ್ಯೆ , ಜಲಾವೃತಗೊಂಡ ನಗರದ ತಗ್ಗುಪ್ರದೇಶಗಳಿಗೆ ಇಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜೊತೆಗಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಇಂದು ಜಿಲ್ಲೆಯ ಇತರ ನೆರೆಪೀಡಿತ ಪ್ರದೇಶಗಳಿಗೂ ಡಿ.ಸಿ. ಭೇಟಿ ನೀಡಲಿದ್ದಾರೆ.
Kshetra Samachara
20/09/2020 04:11 pm