ಉಡುಪಿ: ಶನಿವಾರ ಮಧ್ಯಾಹ್ನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಡುಪಿ ನಗರದ ಪ್ರಮುಖ ಬೀದಿಗಳು ಜಲಾವೃತಗೊಂಡಿದ್ದು, ಉಡುಪಿ-ಮಣಿಪಾಲ ಸಂಪರ್ಕ ರಸ್ತೆ ಇದೇ ಮೊದಲ ಬಾರಿಗೆ ಕಡಿತಗೊಂಡಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಇಂದೂ ಕೂಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಖ್ಯವಾಗಿ ಉಡುಪಿ-ಮಣಿಪಾಲ ಸಂಪರ್ಕ ರಸ್ತೆಯೇ ಕಡಿತಗೊಂಡಿದ್ದು, ಹೆದ್ದಾರಿಯಲ್ಲಿ ನೀರು ನಿಂತಿದೆ.
ರಸ್ತೆಯಲ್ಲಿ ಮಳೆನೀರು ತುಂಬಿ ಹರಿಯುತ್ತಿರುವ ಕಾರಣ ಕೃಷ್ಣಮಠ ಪರಿಸರದ ಕಲ್ಸಂಕ ಬೈಲಕೆರೆ ಪ್ರದೇಶ ನೆರೆಯಿಂದ ಆವೃತವಾಗಿದೆ.
ಇದೇ ಮೊದಲ ಬಾರಿಗೆ ಸತತ ಮಳೆಯಿಂದ ಬನ್ನಂಜೆ ,ಕೊಡವೂರು, ಪಾಡಿಗಾರು, ಗುಂಡಿಬೈಲು ಪ್ರದೇಶ ಜಲಾವೃತಗೊಂಡಿವೆ.
ಪೆರ್ಡೂರಿನ ಪುತ್ತಿಗೆ ಪರಿಸರದಲ್ಲೂ ರಸ್ತೆ ಸಂಚಾರ ಬಂದ್ ಆಗಿದೆ.
ರಾತ್ರಿಯಿಡೀ ಬಿಟ್ಟೂಬಿಡದೆ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಬೈಲಕೆರೆ ಪ್ರದೇಶದ ಜನರನ್ನು ರಾತ್ರಿಯೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
Kshetra Samachara
20/09/2020 09:11 am