ಮಂಗಳೂರು: ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಮಂಗಳೂರಿನ ಹೊರವಲಯ ಸುರತ್ಕಲ್ ಸಮೀಪದ ಚೇಳ್ಯಾರು, ಖಂಡಿಗೆ , ನಂದಿನಿ ಕೆಳಗಿನ ಕರೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ.
ನಂದಿನಿ ಹಾಗೂ ಶಾಂಭವಿ ನದಿಗಳು ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶದ ಕೃಷಿ ಭೂಮಿ ಸಂಪೂರ್ಣ ಮುಳುಗಡೆಯಾಗಿದ್ದು, ಭತ್ತದ ಬೆಳೆ ನೀರುಪಾಲಾಗಿದೆ, ಕೊಲ್ಯ ಶ್ರೀ ಜಾರಂದಾಯ ದೇವಸ್ಥಾನಕ್ಕೆ ನೀರು ನುಗ್ಗಿದೆ.
ತಗ್ಗು ಪ್ರದೇಶದ ಕೃಷಿಭೂಮಿ ಸಂಪೂರ್ಣ ಮುಳುಗಡೆಯಾಗಿದೆ. ಅಪಾಯದಲ್ಲಿರುವ ಮನೆಯ ಕುಟುಂಬ ಸದಸ್ಯರನ್ನು ಸ್ಥಳೀಯರು ಹಾಗೂ ಅಗ್ನಿಶಾಮಕದಳದ ತಂಡದಿಂದ ದೋಣಿ ಮೂಲಕ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
Kshetra Samachara
20/09/2020 02:40 pm