ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶ್ರೀ ಕಾರಿಂಜ ಕ್ಷೇತ್ರ ಉಳಿವಿಗೆ ನಾಗಸಾಧುಗಳನ್ನೂ ಕರೆಸುತ್ತೇವೆ; ಶ್ರೀ ವಿಠಲಗಿರಿ ಮಹಾರಾಜ್‌

ಮಂಗಳೂರು: ರಾಜಕೀಯವಾಗಿ ಹಿಂದೂಗಳ ಓಟ್‌ ಬ್ಯಾಂಕ್‌ ಬೇಕಿದ್ದರೆ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯ ನಿಲ್ಲಿಸಿ ಎಂದು ನಾಗಸಾಧು ಶ್ರೀ ವಿಠಲಗಿರಿ ಮಹಾರಾಜ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ಕ್ಲಾಕ್‌ ಟವರ್‌ ಬಳಿ ಹಿಂದೂ ಜಾಗರಣ ವೇದಿಕೆ, ಮಂಗಳೂರು ವಿಭಾಗದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪಾವಿತ್ರ್ಯತೆ ರಕ್ಷಣೆಗಾಗಿ 2ನೇ ಹಂತದ ಹೋರಾಟ, ಧರಣಿ ನಡೆಯಿತು. ಈ ವೇಳೆ ಮಾತನಾಡಿದ ಅವರು, ಹೋರಾಟಗಾರರು ಯಾರೂ ಧೃತಿಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ. ಅವಶ್ಯಕತೆ ಬಿದ್ದಲ್ಲಿ ಎಲ್ಲ ನಾಗಸಾಧುಗಳನ್ನು ಮಂಗಳೂರಿಗೆ ಕರೆಸುತ್ತೇವೆ. ಈ ಬಗ್ಗೆ ಮಾತುಕತೆ ಆಗಿದೆ ಎಂದು ಹೇಳಿದರು.

ಶ್ರೀ ಕಾರಿಂಜ ಕ್ಷೇತ್ರ ಪರಿಸರದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು. ಒಂದು ವೇಳೆ ಹೋರಾಟಕ್ಕಿಳಿದರೆ ನಮ್ಮ ಶಕ್ತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾವು ಪ್ರಾಣ ಕೊಟ್ಟಾದರೂ ಸರಿ, ಕಾರಿಂಜ ಕ್ಷೇತ್ರವನ್ನು ಉಳಿಸಿಕೊಳ್ಳಲು ರೆಡಿ ಇದ್ದೇವೆ ಎಂದರು.

Edited By : Manjunath H D
Kshetra Samachara

Kshetra Samachara

21/12/2021 03:22 pm

Cinque Terre

19.86 K

Cinque Terre

0

ಸಂಬಂಧಿತ ಸುದ್ದಿ