ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೀನುಗಾರರ ಬಲೆಗೆ ಬೃಹತ್ ಗಾತ್ರದ ಅಪರೂಪದ 'ಮಡಲ್ ಮೀನು'; ವೀಡಿಯೋ ವೈರಲ್

ಮಂಗಳೂರು ನಗರದ ಮೊಗವೀರಪಟ್ಟಣದ ಮೀನುಗಾರರ ಬಲೆಗೆ ಬೃಹತ್ ಗಾತ್ರದ 'ಮಡಲ್ ಮೀನು' ಎಂಬ ಅಪರೂಪದ ಮೀನೊಂದು ಬಿದ್ದಿದೆ.

ಆಳಸಮುದ್ರ ಮೀನುಗಾರಿಕೆ ನಡೆಸಲು ತೆರಳಿದ್ದ ಅಶ್ವಿನ್ ಪುತ್ರನ್ ಎಂಬವರ ಮಾಲಕತ್ವದ ಹಂಸ್ ಎಂಬ ಬೋಟ್ ಮೀನುಗಾರರ ಬಲೆಗೆ ಈ ಮಡಲ್ ಮೀನು ಬಂದಿದೆ. ಬಲೆಗೆ ಬಿದ್ದಿರುವ ಈ ಮೀನನ್ನು ಮೇಲಕ್ಕೆತ್ತುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಮೀನುಗಾರರೊಬ್ಬರು ಸೆರೆಹಿಡಿದಿರುವ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಈ ವೀಡಿಯೋ ಸಖತ್ ವೈರಲ್ ಆಗಿದೆ.

Edited By :
Kshetra Samachara

Kshetra Samachara

06/03/2022 02:15 pm

Cinque Terre

15.38 K

Cinque Terre

0

ಸಂಬಂಧಿತ ಸುದ್ದಿ