ಮಂಗಳೂರು: ನಗರದ ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ದೋಷಕ್ಕೊಳಗಾಗಿರುವ ಸಿರಿಯಾ ದೇಶದ ಹಡಗಿನಲ್ಲಿದ್ದ 15 ಮಂದಿ ಸಿಬ್ಬಂದಿಯನ್ನು ನಿನ್ನೆ ರಕ್ಷಿಸಲಾಗಿತ್ತು.ಇದೀಗ ಈ ಸಿಬ್ಬಂದಿ ಕೋಸ್ಟ್ ಗಾರ್ಡ್ ಸುಪರ್ದಿಯಲ್ಲಿ ಸುರಕ್ಷಿತರಾಗಿದ್ದಾರೆ.
ಎಂವಿ ಪ್ರಿನ್ಸೆಸ್ ಮಿರಾಲ್ ಎಂಬ ಸಿರಿಯಾ ದೇಶದ ಹಡಗು ಮಂಗಳೂರಿನ ಉಳ್ಳಾಲದ 5-6 ನಾಟಿಕಲ್ ಮೈಲ್ ದೂರದಲ್ಲಿ ತಾಂತ್ರಿಕ ದೋಷಕ್ಕೊಳಗಾಗಿತ್ತು.ಪರಿಣಾಮ ಹಡಗಿನಲ್ಲಿದ್ದ 15 ಮಂದಿ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.
ಇದೀಗ ರಕ್ಷಿಸಲ್ಪಟ್ಟ ಸಿರಿಯಾ ದೇಶದ ಹಡಗಿನ ಸಿಬ್ಬಂದಿ ಕೋಸ್ಟ್ ಗಾರ್ಡ್ ಸುಪರ್ದಿಯಲ್ಲಿದ್ದಾರೆ. ಕೋಸ್ಟ್ ಗಾರ್ಡ್ ನ ಪ್ರಕ್ರಿಯೆ ಮುಗಿದ ಬಳಿಕ ಅವರನ್ನು ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗುತ್ತದೆ. ಆ ಬಳಿಕ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಹಾಸ್ಟೆಲ್ ನಲ್ಲಿ ವಾಸ್ತವ್ಯ ಇರಿಸಲಾಗುತ್ತದೆ. ಬಳಿಕ ನೆಲಮಂಗಲದ ವಿದೇಶಿ ಪತ್ತೆ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅದರ ನಂತರ ರಾಯಭಾರಿ ಕಚೇರಿಯ ಆದೇಶದ ಬಳಿಕ ಅವರನ್ನು ಸಿರಿಯಾ ದೇಶಕ್ಕೆ ಕಳುಹಿಸಲಾಗುತ್ತದೆ.
PublicNext
22/06/2022 09:15 pm