ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಡ್ಡೋಡಿ: ಅಳಿವಿನಂಚಿನಲ್ಲಿರುವ ನಾಗಲಿಂಗ ವೃಕ್ಷ ಪೋಷಿಸಿ ಮಾದರಿಯಾದ ಯುವಕ

ಮುಲ್ಕಿ: ನಾಗಲಿಂಗ ವೃಕ್ಷವು ಅತ್ಯಂತ ಸುಗಂದಭರಿತ, ಅಳಿವಿನಂಚಿನಲ್ಲಿರುವ ವೃಕ್ಷವಾಗಿದೆ. ವಿರಳವಾಗಿ ಕಾಣ ಸಿಗುವ ಈ ವೃಕ್ಷವನ್ನು ಇದೀಗ ನಿಡ್ಡೋಡಿಯ ಯುವಕರೊಬ್ಬರು ಬೆಳೆಸಿ ಉಚಿತವಾಗಿ ನೀಡುತ್ತಿದ್ದಾರೆ.

ಕಿನ್ನಿಗೋಳಿ ಸಮೀಪದ ನಿಡ್ಡೋಡಿಯ ವಿನೀಶ್ ಪೂಜಾರಿ ಎಂಬ ಯುವಕ ಈ ಬಗ್ಗೆ ಆಸಕ್ತಿವಹಿಸಿ ಇದರ ಬೀಜವನ್ನು ಸಂಗ್ರಹಿಸಿ ತಮ್ಮ ಮನೆಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಸುಮಾರು 700ಕ್ಕೂ ಅಧಿಕ ಗಿಡ ಬೆಳೆಸಿದ್ದಾರೆ. ಅಳಿವಿನಂಜಿನಲ್ಲಿರುವ ಈ ವೃಕ್ಷವನ್ನು ಬೆಳೆಸಬೇಕು ಮುಂದಿನ ಪೀಳಿಗೆಗೆ ಇದರ ಅರಿವಾಗಬೇಕು ಎಂಬ ಅಲೋಚನೆಯಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಸಂಘ ಸಂಸ್ಥೆಗಳಿಗೆ, ದೇವಸ್ಥಾನಗಳಿಗೆ ಮತ್ತು ಅಗತ್ಯ ಜನರಿಗೆ ಇದನ್ನು ವಿನೀಶ್ ಪೂಜಾರಿ ಉಚಿತವಾಗಿ ನೀಡುತ್ತಿದ್ದಾರೆ.

ಪಡುಬಿದ್ರೆ, ಖಡ್ಗೇಶ್ವರೀ, ಕಾರ್ಕಳ ಉಮಾಮಹೇಶ್ವರ, ಕೆಂಪ್ಲಾಜೆ ದುರ್ಗಾಪರಮೇಶ್ವರಿ, ಮುಚ್ಚುರು ಕಾನ, ಮುಚ್ಚೂರು ಆದಿ ಸ್ಥಳ, ಸಿದ್ದಕಟ್ಟೆ ನಾಗಬನ, ಕಾರಿಂಜೆ ಮತ್ತಿತರ ದೇವಸ್ಥಾನಗಳಿಗೆ ವಿನೀಶ್ ಅವರು ಗಿಡಗಳನ್ನು ನೀಡಿದ್ದಾರೆ. ಅಲ್ಲದೆ ತಾವೇ ಹೋಗಿ ಅಲ್ಲಿ ನೆಟ್ಟು ಬರುತ್ತಾರೆ. ಎಲ್ಲಾ ದೇವಸ್ಥಾನಗಳಲ್ಲಿ ನಾಗಲಿಂಗ ವೃಕ್ಷ ಇರಬೇಕು ಎಂಬ ಆಸೆ ವಿನೀಶ್ ಅವರದ್ದಾಗಿದೆ. ಹಲವು ಮಂದಿ ಈ ವೃಕ್ಷವನ್ನು ನೋಡಲು ಇವರ ಮನೆಗೆ ಭೇಟಿ‌ ನೀಡುತ್ತಿದ್ದಾರೆ. ನಾಗಲಿಂಗ ವೃಕ್ಷದ ಕಾಯಿ ದೊಡ್ಡ ಬಾಲಿನ ಆಕಾರದಲ್ಲಿದ್ದು, ಇದರ ಒಳಗೆ ಬೀಜಗಳಿವೆ. ಈ ಕಾಯಿಯ ಮೇಲ್ಭಾಗದ ಪದರ ದಪ್ಪವಾಗಿರುದರಿಂದ ಬೀಜ ಪ್ರಸರಣವಾಗದೆ ಗಿಡಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ವಿನೀಶ್.

Edited By : Nagesh Gaonkar
PublicNext

PublicNext

02/02/2022 08:11 am

Cinque Terre

51.58 K

Cinque Terre

2

ಸಂಬಂಧಿತ ಸುದ್ದಿ