ಮಂಗಳೂರು: ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸುವ ಉದ್ದೇಶದಿಂದ ಮತ್ತು ಮರಗಿಡಗಳ ಬಗ್ಗೆ ಜಾಗೃತಿ ಮೂಡಿಸುವ ದೂರ ದೃಷ್ಟಿಯಿಂದ ರಾಷ್ಟ್ರಮಟ್ಟದ ‘ಹಣ್ಣುಗಳ ಬೀಜ ಸಂಗ್ರಹ ಸ್ಪರ್ಧೆ’ಯೊಂದು ಮಂಗಳೂರಿನಲ್ಲಿ ಆಯೋಜನೆಗೊಂಡಿತ್ತು. ಈ ಅಪರೂಪದ ಕಾಡಿನ ಹಣ್ಣಿನ ಬೀಜಗಳ ಸಂಗ್ರಹದ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು, ಯುನಿವರ್ಸಲ್ ನಾಲೆಡ್ಜ್ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್‌ಇಸಿಎಫ್).
ಸಂಘಟನೆಯ ನಿರೀಕ್ಷೆಗೂ ಮೀರಿ ಕರ್ನಾಟಕ ಮಾತ್ರವಲ್ಲದೇ ದೇಶದ ಮೂಲೆ ಮೂಲೆಗಳಿಂದಲೂ ಮಕ್ಕಳು ಆಸಕ್ತಿಯಿಂದ ಕಾಡುಹಣ್ಣಿನ ಬೀಜಗಳನ್ನು ಸಂಗ್ರಹಿಸಿ ಪಾಲ್ಗೊಂಡಿದ್ದಾರೆ. ಸುಮಾರು 400 ಮಕ್ಕಳು ಉತ್ತಮ ಪ್ಯಾಕ್‌ನೊಂದಿಗೆ ಅಪರೂಪದ ಕಾಡಿನ ಹಣ್ಣಿನ ಬೀಜಗಳನ್ನು ಕಳುಹಿಸಿದ್ದಾರೆ.ಕೊರೋನಾ ಲಾಕ್‌ಡೌನ್ನಲ್ಲಿ ಪರಿಸರ ಪ್ರೇಮಿ ಸಂಘಟನೆಯ ಈ ಯೋಜನೆಗೆ 400 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುದರ ಮೂಲಕ ಆಯೋಜಕರಿಗೆ ಮತ್ತಷ್ಟು ಹುರುಪು ತುಂಬಿದ್ದಾರೆ.
ಇದರ ಮುಂದಿನ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 220 ಪಂಚಾಯತ್ ವ್ಯಾಪ್ತಿಯಲ್ಲಿ ಹಣ್ಣಿನ ಗಿಡಗಳನ್ನು ನೆಡುವ ‘ಗ್ರೀನ್ ಪಂಚಾಯತ್ ಯೋಜನೆ'ಯನ್ನು ಈ ಪರಿಸರ ಪ್ರೇಮಿ ಸಂಘಟನೆ ಆಯೋಜಿಸಿದೆ. ಪಶ್ಚಿಮ ಘಟ್ಟಗಳಲ್ಲಿಯೂ ಹಣ್ಣಿನ ಗಿಡಗಳನ್ನು ಬೆಳೆಸುವ ಯೋಜನೆ ಇದೆಯಂತೆ. ರಾಷ್ಟ್ರಮಟ್ಟದ ಬೀಜ ಸಂಗ್ರಹ ಸ್ಪರ್ಧೆಯಲ್ಲಿ ಒಟ್ಟು 400 ಮಕ್ಕಳು ಪಾಲ್ಗೊಂಡಿದ್ದು, ಸಿದ್ಧಾಪುರದ ಸಿರಸಿಯ ಶ್ರೇಯಾ ಹೆಗ್ಡೆ ಪ್ರಥಮ, ಉಡುಪಿಯ ಭಾಗ್ಯಲಕ್ಷ್ಮೀ ದ್ವಿತೀಯ ಮತ್ತು ಮಂಗಳೂರಿನ ಜಾನ್ಸನ್ ಡಿಸೋಜ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
Kshetra Samachara
07/08/2021 05:58 pm