ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿಕಲಚೇತನ ವ್ಯಕ್ತಿಗೆ ಆಸರೆ ನೀಡುವ ಎರಡು ನಾಯಿಗಳು..!

ಮಂಗಳೂರು: ನಾಯಿ‌ ನಿಯತ್ತಿನ‌ ಪ್ರಾಣಿ. ತನಗೆ ಅನ್ನ ಕೊಟ್ಟ, ಪ್ರೀತಿ ನೀಡಿದವರನ್ನು ಸದಾ ಸ್ಮರಿಸುವ ಪ್ರಾಣಿ. ಇದಕ್ಕೆ ಜೀವಂತ ಉದಾಹರಣೆ ಮಂಗಳೂರಲ್ಲಿದೆ. ತನಗೆ ದಿನಾಲೂ ಅನ್ನ ನೀಡುವ ವಿಕಲಚೇತನ ವ್ಯಕ್ತಿಯನ್ನು ಸದಾ ಕಾಯುತ್ತಿದೆ ಈ ನಾಯಿಗಳು. ನಡೆಯಲು ಸಾಧ್ಯವಾಗದಷ್ಟು ಅಂಗವೈಕಲ್ಯ ಹೊಂದಿರುವ ಈ ವ್ಯಕ್ತಿ ಸಣ್ಣ ತಳ್ಳುಗಾಡಿಯ ಮೇಲೆ ಕುಳಿತು ಕೈಯಿಂದ ಗಾಡಿ ದೂಡುತ್ತಾ ಮಂಗಳೂರಿನ ಹಂಪನಕಟ್ಟೆ, ಪಿವಿಎಸ್‌ ಮುಂತಾದೆಡೆ ಸಂಚರಿಸುತ್ತಾರೆ. ಹೀಗೆ ಸಂಚರಿಸುವಾಗ ಯಾರಾದರೂ ಹಣ ನೀಡಿದರೆ, ಅದರಿಂದ ಜೀವನ ಸಾಗಿಸುತ್ತಾರೆ.

ತಾನು ಕೊಂಡ ಆಹಾರದಲ್ಲಿ ಈ ಎರಡು ನಾಯಿಗಳಿಗೆ ಪಾಲು ಇದ್ದೇ ಇದೆ. ಕಳೆದ ಆರೇಳು ವರ್ಷಗಳಿಂದ ಎರಡು ಶ್ವಾನಗಳು ಈ ವ್ಯಕ್ತಿಯ ಜತೆಯಾಗಿದೆ. ಮಲಗಿರುವಾಗ ಶ್ವಾನಗಳೆರಡೂ ಎಚ್ಚರವಿದ್ದು ಕಾಯುತ್ತವೆ. ಯಜಮಾನನ ತಳ್ಳುಗಾಡಿ ಚಲಿಸುವ ಸದ್ದು ಕೇಳಿದ ತತ್‌ಕ್ಷಣ ಓಡಿ ಬರುತ್ತವೆ. ಆತ ಹೋದಲೆಲ್ಲ ಆತನೊಂದಿಗೆ ಸಾಗುತ್ತವೆ ಈ ವ್ಯಕ್ತಿಯೊಂದಿಗೆ ಶ್ವಾನಗಳೆರಡು ಸದಾ ಜತೆಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Edited By : Manjunath H D
Kshetra Samachara

Kshetra Samachara

21/11/2020 03:41 pm

Cinque Terre

30.09 K

Cinque Terre

2

ಸಂಬಂಧಿತ ಸುದ್ದಿ