ಬೈಂದೂರು: ಇಲ್ಲಿನ ಗೋಳಿಹೊಳೆ ಗ್ರಾಮದ ಅರೆಶಿರೂರು ರವಿ ಶೆಟ್ಟಿ ಬೈಂದೂರು ಅವರ ಮನೆ ತೋಟದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಸುರಕ್ಷಿತವಾಗಿ ಹಿಡಿದು ಮೀಸಲು ಅರಣ್ಯದಲ್ಲಿ ಬಿಡಲಾಯಿತು.
ಕರ್ನಾಟಕ ಕಾರ್ಮಿಕ ವೇದಿಕೆ ರಾಜ್ಯಾಧ್ಯಕ್ಷ, ಕಾರ್ಮಿಕ ಮುಖಂಡ ಡಾ.ರವಿ ಶೆಟ್ಟಿ ಅವರ ಮನೆಯ ಅಡಿಕೆ ತೋಟದಲ್ಲಿ ಅವರ ಸಾಕು ನಾಯಿಯನ್ನು ಹಿಡಿದು ನುಂಗುತ್ತಿದ್ದ ಸಂದರ್ಭ ರವಿ ಶೆಟ್ಟಿಯವರು ಹಾವಿನ ಬಾಯಿಂದ ನಾಯಿಯನ್ನು ಬಿಡಿಸಿದ್ದಲ್ಲದೆ, ಸುಮಾರು 20 ಅಡಿ ಉದ್ದ 50ಕೆ.ಜಿ.ಯಷ್ಟು ಭಾರವಿರುವ ಹೆಬ್ಬಾವನ್ನು ಹಾವಿಗೆ ಯಾವುದೇ ತೊಂದರೆ ಆಗದ ರೀತಿ ಹಿಡಿದು ಗೋಳಿಹೊಳೆ ವಿಭಾಗಿಯ ಪ್ರಭಾರ ಅರಣ್ಯ ರಕ್ಷಕ ರಾಜೀವ ಎಸ್ .ಗೌಡರ ಸಹಾಯದೊಂದಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.
ದೊಡ್ಡಗಾತ್ರದ ಹಾವನ್ನು ಒಬ್ಬರಿಂದ ಎತ್ತಿ ಹಿಡಿಯುವುದು ಆಗದಿದ್ದಾಗ ಅರಣ್ಯ ಇಲಾಖೆಯವರಿಗೆ ತಿಳಿಸಿದ ತಕ್ಷಣ ಸಮೀಪದಲ್ಲೇ ಇದ್ದ ಅರಣ್ಯ ರಕ್ಷಕರಾದ ರಾಜೀವ್ ಎಸ್ .ಗೌಡರು ಮತ್ತು ಸಹಾಯಕ ನಾರಾಯಣ ಗೌಡರು ಆಗಮಿಸಿ ಸಹಕರಿಸಿದರು.
ರವಿ ಶೆಟ್ಟಿಯವರು ಇಂದು ಬೆಂಗಳೂರಿನಿಂದ ಬಂದು ಹತ್ತೇ ನಿಮಿಷದಲ್ಲಿ ಈ ಘಟನೆ ನಡೆದಿದ್ದು, ಇನ್ನು ಎರಡೇ ನಿಮಿಷ ಕಳೆದಿದ್ದರೂ ಹಾವು ನಾಯಿಯನ್ನು ನುಂಗುತ್ತಿತ್ತು ಮತ್ತು ಅಕ್ಕಪಕ್ಕದ ಮನೆಯವರು ಮತ್ತು ಮಕ್ಕಳು ಓಡಾಡುವ ಸ್ಥಳ ಆಗಿರುವುದರಿಂದ ಹಾವನ್ನು ಎಚ್ಚರಿಕೆಯಿಂದ ಹಿಡಿದು, ಮೀಸಲು ಅರಣ್ಯದಲ್ಲಿ ಬಿಡಲಾಗಿದೆ. ಇದನ್ನು ಹಿಡಿಯುವುದು ತಕ್ಷಣಕ್ಕೆ ನಮಗೆ ದೊಡ್ಡ ಸವಾಲಾಗಿತ್ತು ಎಂದು ತನ್ನ ಅನುಭವ ಹಂಚಿಕೊಂಡರು.
Kshetra Samachara
29/09/2020 08:27 pm