ಉಡುಪಿ: ಆಗಸದಲ್ಲಿ ರಾತ್ರಿ ಶತಮಾನದ ಕೌತುಕ ನಡೆಯಿತು. ಗುರು ಗ್ರಹ ಮತ್ತು ಶನಿ ಗ್ರಹ ಸಮಾಗಮ ಆಗಿದೆ. ಈ ವಿದ್ಯಮಾನವನ್ನು ಉಡುಪಿಯಲ್ಲಿ ನೂರಾರು ಜನರು ಕಣ್ತುಂಬಿಕೊಂಡರು. ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮೂರು ಟೆಲಿಸ್ಕೋಪ್ ಮೂಲಕ ಖಗೋಳ ವೀಕ್ಷಣೆ ಆಸಕ್ತರಿಗೆ ಗುರು- ಶನಿಯ ಅದ್ಭುತ ಸಮಾಗಮವನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಕಲ್ಪಿಸಿ ಕೊಟ್ಟಿತು.
ಖಗೋಳ ಶಾಸ್ತ್ರಜ್ಞ ಡಾ.ಎ.ಪಿ. ಭಟ್ ಅವರು ಸಂಪೂರ್ಣ ವಿವರಣೆಯನ್ನೂ ನೀಡಿದರು. ಗುರು- ಶನಿಯ ಸಮಾಗಮದ ಜೊತೆಗೆ ಚಂದ್ರ, ನಕ್ಷತ್ರಪುಂಜಗಳ ಬಗ್ಗೆ ಈ ಸಂದರ್ಭ ಅಮೂಲ್ಯ ಮಾಹಿತಿ ನೀಡಲಾಯಿತು.
Kshetra Samachara
22/12/2020 10:30 am