ಉಡುಪಿ: ಕೃಷ್ಣನಗರಿಯಲ್ಲಿ ಸಂಜೆ ವೇಳೆ ಸುರಿದ ದಿಢೀರ್ ಸಿಡಿಲು,ಮಿಂಚು ಸಹಿತ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿತು.
ಆರೂವರೆ ಗಂಟೆಯಿಂದ ಎಂಟು ಗಂಟೆ ವರೆಗೆ ಸುಮಾರು ಒಂದೂವರೆ ತಾಸು ಭಾರೀ ಮಳೆಯಾಯಿತು.
ಸಂಜೆ ವೇಳೆ ಅಚಾನಕ್ ಸುರಿದ ಮಳೆಯಿಂದಾಗಿ ಕಚೇರಿ ಮತ್ತಿತರ ಕಡೆ ಕೆಲಸದಿಂದ ಮನೆಗೆ ತೆರಳುವವರಿಗೆ ಸಾಕಷ್ಟು ತೊಂದರೆಯಾಯಿತು. ಗುಡುಗು ಮಿಂಚಿನಿಂದ ಕೂಡಿದ ಮಳೆಗೆ ವಾಹನ ಸವಾರರು, ಪಾದಚಾರಿಗಳು ಅಕ್ಷರಶಃ ಪರದಾಡಿದರು. ಈ ಕ್ಷಣಕ್ಕೂ ಮಳೆ ಮುಂದುವರೆದಿದ್ದು, ಮಳೆಗಾಲವನ್ನು ನೆನಪಿಸುವಂತಿದೆ.
Kshetra Samachara
08/12/2020 08:48 pm