ಮುಲ್ಕಿ: ಸಸಿಹಿತ್ಲು ಪರಿಸರದಲ್ಲಿ ಭಾನುವಾರ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಅಪಾಯಕಾರಿಯಾಗಿ ಗೋಚರಿಸುತ್ತಿತ್ತು ಎಂದು ಸ್ಥಳೀಯ ಪಂಚಾಯತ್ ಮಾಜಿ ಸದಸ್ಯ ಚಂದ್ರ ಕುಮಾರ್ ತಿಳಿಸಿದ್ದಾರೆ.
ಸೂರ್ಯನ ಕಿರಣದ ಶಾಖಕ್ಕೆ ಸಮುದ್ರದ ನೀರಿನ ಅಡಿಯಲ್ಲಿರುವ ಪಾಚಿ ಸತ್ತು ತುಂಡುತುಂಡಾಗಿ ಮೇಲೆ ಬಂದು ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿದೆ ಎಂದು ಹೇಳಿದ್ದಾರೆ.
ಇದರಿಂದಾಗಿ ಮೀನುಗಾರಿಕೆಗೆ ತೊಂದರೆ ಆಗಿದ್ದು, ಬಲೆಗೆ ಪಾಚಿಯ ಮಡ್ಡಿ ಸೇರಿಕೊಂಡು ಬಲೆಯಲ್ಲಿ ಮೀನು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಇದೇ ಪ್ರಥಮ ಬಾರಿಗೆ ಸೂರ್ಯನ ಶಾಖಕ್ಕೆ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಇದರಲ್ಲಿ ಸ್ನಾನ ಮಾಡಿದರೆ ಮೈಕೈ ತುರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
Kshetra Samachara
23/11/2020 04:04 pm