ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಅಕಾಲಿಕ ಮಳೆ ತಂದ ಗೋಳು; ಗದ್ದೆಯಲ್ಲೇ ಮಲಗಿದ ಭತ್ತ ಪೈರು ರಾಶಿ!

ಕಾಪು: ಅಕಾಲಿಕ ಮಳೆಯಿಂದಾಗಿ ಬೈಲು ಸಾಲಿನ ಭತ್ತದ ಗದ್ದೆಗಳಲ್ಲಿ ಮಳೆನೀರು ಸಂಗ್ರಹವಾಗಿದ್ದು, ಕಾಪು ತಾಲೂಕಿನ ವಿವಿಧೆಡೆ ಬೆಳೆದು ನಿಂತ ಭತ್ತದ ಪೈರುಗಳು ಗದ್ದೆಯಲ್ಲಿ ಮಲಗಿ ಬಿಟ್ಟಿವೆ!

ಇದರಿಂದಾಗಿ ರೈತರು ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ ಭೀತಿ ಎದುರಿಸುವಂತಾಗಿದೆ.ಕರಾವಳಿಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ಬೆಳೆದು ನಿಂತಿರುವ ಪೈರುಗಳು ಮಕಾಡೆ ಮಲಗಿದ್ದು, ಇದರಿಂದಾಗಿ ಕೃಷಿಕರು ತಾವು ಕಷ್ಟಪಟ್ಟು ಬೆಳೆಸಿದ ಬೆಳೆಯನ್ನು ಸುರಕ್ಷಿತವಾಗಿ ಮನೆಯೊಳಗೆ ತರಲಾಗದೆ ಕಂಗಾಲಾಗಿದ್ದಾರೆ.

ಕಾಪು ತಾಲೂಕಿನ ಕಾಪು, ಮಜೂರು, ಕಳತ್ತೂರು, ಮಲ್ಲಾರು, ಎರ್ಮಾಳ್ ಸಹಿತವಾಗಿ ಹೊಳೆ ಬದಿಯ ಭತ್ತದ ಗದ್ದೆಗಳಲ್ಲಿ ಮಳೆನೀರು ನಿಂತಿದ್ದು, ಭತ್ತದ ಪೈರುಗಳು ನೀರಿನಲ್ಲಿ ತೇಲುತ್ತಿವೆ. ಗದ್ದೆಗಳಲ್ಲಿ ಮತ್ತೆ ಮಳೆನೀರು ಸಂಗ್ರಹಗೊಂಡ ಪರಿಣಾಮ ಗದ್ದೆಯಲ್ಲೇ ಭತ್ತ ಮೊಳಕೆ ಒಡೆಯಲಾರಂಭಿಸಿದೆ.

ಗ್ರಾಮೀಣ ಪ್ರದೇಶಗಳ ಬಹುತೇಕ ಕಡೆಗಳಿಗೆ ಗ್ರಾಮಕ್ಕೆ ಒಂದು, ಎರಡರಂತೆ ಈಗಾಗಲೇ ಬಾಡಿಗೆ ಕೊಯ್ಲು ಯಂತ್ರಗಳು ಬಂದಿವೆಯಾದರೂ ಅದನ್ನು ಕೂಡ ಸಮರ್ಪಕವಾಗಿ ಬಳಸಿಕೊಳ್ಳಲಾಗದ ಸಂದಿಗ್ಧತೆ ರೈತರನ್ನು ಕಾಡುತ್ತಿದೆ. ಹಾಳಾಗಿರುವ ಭತ್ತದ ಬೆಳೆಯನ್ನು ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ದೊರಕಿಸಿ ಕೊಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

19/10/2021 01:36 pm

Cinque Terre

13.66 K

Cinque Terre

0

ಸಂಬಂಧಿತ ಸುದ್ದಿ