ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳ ಕಾಲ ಸುರಿದ ಅಕಾಲಿಕ ಮಳೆಗೆ ಭತ್ತದ ಕೃಷಿ ನಾಶಗೊಂಡಿದೆ.
ಸೋಮವಾರ,ಮಂಗಳವಾರ ಬುಧವಾರ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿತ್ತು.
ಸಾಮಾನ್ಯವಾಗಿ ವಾಡಿಕೆಯಂತೆ ಅಕ್ಟೋಬರ್ ನಲ್ಲಿ ಮಳೆಯಾಗುವುದು ಕಡಿಮೆ.ಆದರೆ, ಈ ವಾರ ಸುರಿದ ಮಳೆಯ ನೀರು ಉಡುಪಿ ಜಿಲ್ಲೆಯ ಹಲವೆಡೆ ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ.ಪರಿಣಾಮವಾಗಿ ಭತ್ತದ ಬೆಳೆ ಕೊಳೆಯಲಾರಂಭಿಸಿದೆ.
ಈ ಬೆಳವಣಿಗೆಯಿಂದಾಗಿ ಬೈಂದೂರು, ಕುಂದಾಪುರ ಮತ್ತು ಉಡುಪಿ ತಾಲೂಕಿನ ಹಲವೆಡೆ ಭತ್ತ ಕೃಷಿಕರು ಕಂಗಾಲಾಗಿದ್ದಾರೆ.ಭತ್ತದ ಬೆಳೆ ಇನ್ನೇನು ಪೈರು ಬಿಡುವ ಮುನ್ನ ಬಂದ ಅಕಾಲಿಕ ಮಳೆ ಸಾಕಷ್ಟು ನಷ್ಟವನ್ನುಂಟು ಮಾಡಿದೆ.
ಗದ್ದೆಗಳಲ್ಲಿ ನೀರು ನಿಂತ ಪರಿಣಾಮ ಭತ್ತದ ಬೆಳೆ ಕೊಳೆತು ಕಪ್ಪು ಬಣ್ಣಕ್ಕೆ ತಿರುಗಿದೆ. ಇದೀಗ ಮಳೆ ನಿಂತರೂ ಕೃಷಿಕರು ಅಕಾಲಿಕ ಮಳೆಗೆ ಶಪಿಸುತ್ತಿದ್ದಾರೆ. ಎರಡು ವಾರದ ಹಿಂದೆ ನೆರೆ ಬಂದಾಗಲೂ ಜಿಲ್ಲೆಯಲ್ಲಿ ಮಟ್ಟುಗುಳ್ಳ ಬೆಳೆ ನಾಶಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
Kshetra Samachara
15/10/2020 07:56 pm