ಬೈಂದೂರು: ತೆಂಗಿನ ಮರವೊಂದು ಉರುಳಿಬಿದ್ದ ಪರಿಣಾಮ ಮನೆಗೆ ಹಾನಿಯಾಗಿದ್ದು, ಮನೆಯಲ್ಲಿದ್ದ ಮೂವರು ಪಾರಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಗ್ರಾಮದ 4ನೇ ವಾರ್ಡಿನ ಹಳೆಹೆದ್ದಾರಿಯಲ್ಲಿ ಸಂಭವಿಸಿದೆ.
4 ದಿನದಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಇಲ್ಲಿನ ಶ್ರೀಮತಿ ಗಾಣಿಗರ ಅವರ ಮನೆನೇ ಮರ ಬಿದ್ದು ಹಾನಿಯಾಗಿದ್ದು, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಸುಲೋಚನ ಗಾಣಿಗ ಮತ್ತು ರಾಜೇಶ್ ಪೂಜಾರಿ ನಾವುಂದ, ಗ್ರಾಮಸ್ಥರ ಜೊತೆಗೂಡಿ ಮರವನ್ನು ತೆರವುಗೊಳಿಸಿ ಮನೆಯಲ್ಲಿ ವಾಸವಾಗಿದ್ದ, ಮೂರು ಜನರ ಪೈಕಿ ತಾಯಿ,ಮಗು ಹಾಗೂ ಅಜ್ಜಿ ಶ್ರೀಮತಿ ಗಾಣಿಗರವರನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ.
Kshetra Samachara
07/08/2022 07:43 pm