ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸಹಸವಾರ ಮೃತ್ಯು - ಪ್ರಕರಣ ದಾಖಲು

ಮಣಿಪಾಲ: ಟಿಪ್ಪರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸಹಸವಾರ ಮೃತಪಟ್ಟ ಘಟನೆ ಬಡಗುಬೆಟ್ಟು ಗ್ರಾಮದ ಶಾಂತಿನಗರದ ಕ್ರಾಸ್‌ನ ಬಳಿ ಸಂಭವಿಸಿದೆ.

ಮೃತರನ್ನು ಬೈಕ್ ಸಹಸವಾರ ಜನಾರ್ದನ್ ಎಂದು ಗುರುತಿಸಲಾಗಿದೆ. ಸವಾರ ಸಂತೋಷ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಲೆವೂರು ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿದ್ದ ಮರಳು ಸಾಗಾಟದ ಟಿಪ್ಪರ್, ಅಲೆವೂರು ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕಿನಲ್ಲಿದ್ದ ಸವಾರರು ರಸ್ತೆಗೆ ಬಿದ್ದಿದ್ದಾದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜನಾರ್ದನ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
PublicNext

PublicNext

15/12/2024 11:12 am

Cinque Terre

5.64 K

Cinque Terre

0