ಉಡುಪಿ: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಮಳೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಲಾಗಿದೆ.
ಕಳೆದ ರಾತ್ರಿಯಿಂದ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದೆ. ಮೋಡ ಮುಸುಕಿದ ವಾತಾವರಣ ಇಂದೂ ಮುಂದುವರಿದಿದ್ದು,
ನಾಡದೋಣಿ ಮೀನುಗಾರರು ಇಂದೂ ಕೂಡ ತಮ್ಮ ಕಸುಬು ಮಾಡುವ ಹಾಗಿಲ್ಲ. ಉಡುಪಿ ಜಿಲ್ಲಾಡಳಿತ ಆಳ ಸಮುದ್ರ ಮೀನುಗಾರರಿಗೂ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.
ಈ ಮಧ್ಯೆ ಇಂದು ಪರ್ಕಳದಲ್ಲಿ ಜೋರು ಗಾಳಿ, ಮಳೆಗೆ ಭಾರೀ ಮರವೊಂದು ಧರೆಗೆ ಉರುಳಿದ್ದು, ಒಂದು ಗಂಟೆ ಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಬಳಿಕ ನಗರಸಭೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು. ಹಲವೆಡೆ ವಿದ್ಯುತ್ ಕಂಬಗಳಿಗೆ ಮರ ಬಿದ್ದಿದ್ದು,ವಿದ್ಯುತ್ ವ್ಯತ್ಯಯ ಉಂಟಾಗಿದೆ.
Kshetra Samachara
14/10/2020 07:26 pm