ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೂತನ‌ ಎಸ್‌ಪಿಯಾಗಿ ಹಾಕೈ ಅಕ್ಷಯ್ ಮಚೀಂದ್ರ ಅಧಿಕಾರ ಸ್ವೀಕಾರ: ಡ್ರಗ್ಸ್ ದಂಧೆಕೋರರಿಗೆ ವಾರ್ನಿಂಗ್ !

ಉಡುಪಿ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ಎಸ್‌ಪಿಯಾಗಿದ್ದ ಹಾಕೈ ಅಕ್ಷಯ್ ಮಚೀಂದ್ರ ಇವತ್ತು ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಎಸ್‌ಪಿ ವಿಷ್ಣುವರ್ಧನ್ .ಎನ್ ಅವರು ಮಚೀಂದ್ರ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಈ ವೇಳೆ ಮಾತನಾಡಿದ ನೂತನ ಎಸ್‌ಪಿ, ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವ ಭರವಸೆ ನೀಡಿದರು. ಮಾಧ್ಯಮದ ಜೊತೆ ಮಾತನಾಡಿದ ಅವರು, ಡ್ರಗ್ಸ್ ದಂಧೆಗೆ ಕಡಿವಾಣ ಹಾಕುತ್ತೇವೆ. ಡ್ರಗ್ಸ್ ಮಾಫಿಯಾದಿಂದ ಹಣ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಪತ್ತೆ ಹಚ್ಚುತ್ತೇವೆ. ಇದಲ್ಲದೆ ಯುವ ಸಮುದಾಯ ದೇಶದ ಸಂಪತ್ತು. ಅವರನ್ನು ಈ ದಂಧೆಯಿಂದ ಮುಕ್ತರನ್ನಾಗಿ ಮಾಡಬೇಕಿದೆ. ಜನರಿಗೆ ಪೊಲೀಸರ ಮೇಲೆ ತುಂಬ ಭರವಸೆಗಳಿರುತ್ತವೆ. ಅದನ್ನು ಈಡೇರಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮುಂದುವರೆಸುವುದಾಗಿ ಹಾಕೈ ಅಕ್ಷಯ್ ಮಚೀಂದ್ರ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

17/08/2022 04:10 pm

Cinque Terre

6.2 K

Cinque Terre

0

ಸಂಬಂಧಿತ ಸುದ್ದಿ