ಉಡುಪಿ: ಕರಾವಳಿಯಲ್ಲಿ ವಾರದ ಅಂತರದಲ್ಲಿ ಎರಡು ಕೊಲೆ ನಡೆದಿವೆ. ಈ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇವತ್ತು ಜಿಲ್ಲಾ ಪೊಲೀಸರು ಉಡುಪಿ ಗಡಿಭಾಗ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.
ಉಡುಪಿಯ ಉದ್ಯಾವರ ರಾಪ್ಟ್ರೀಯ ಹೆದ್ದಾರಿ ಬಲಾಯಿಪಾದೆ ಜಂಕ್ಷನ್ ಬಳಿ ಮತ್ತು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆ ಮತ್ತಿತರೆಡೆಗಳಲ್ಲಿ ಪೊಲೀಸರು ವಾಹನಗಳ ಬಿಗಿ ತಪಾಸಣೆ ಕೈಗೊಂಡಿದ್ದಾರೆ. ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ಬರುತ್ತಿರುವ ವಾಹನಗಳು ಮತ್ತು ಸವಾರರ ತಪಾಸಣಾ ಕಾರ್ಯ ನಡೆಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸರು ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ.
Kshetra Samachara
29/07/2022 09:56 pm