ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಳಲಿ‌ ಮಸೀದಿ ವಿವಾದ-ಕೊಟ್೯ನಲ್ಲಿ ನಡೆದ ವಾದವೇನು?

ಮಂಗಳೂರು:ಮಳಲಿ ಮಸೀದಿ ಅರ್ಜಿ ವಿಚಾರಣೆಯು ಮಂಗಳೂರು ಕೋರ್ಟ್ ನಲ್ಲಿ ನಡಿಯುತ್ತಿದೆ.ವಿಎಚ್‌ಪಿ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು ನವೀಕರಣ ಸಮಯದಲ್ಲಿ ದೇವಸ್ಥಾನದ ಮಾದರಿ ಸಿಕ್ಕಿದೆ. ಅದರ ಫೋಟೋಗಳನ್ನು ನೀಡಲಾಗಿದೆ.

ಇದೊಂದು ಜ್ಞಾನವಾಪಿ ಮಾದರಿ ಪ್ರಕರಣ, ಸತ್ಯಾಸತ್ಯತೆ ತಿಳಿಯಬೇಕು. ಹೀಗಾಗಿ ಜ್ಞಾನವಾಪಿ ಮಾದರಿಯಲ್ಲಿ ಮಸೀದಿ ಜಾಗದ ಸರ್ವೇ ನಡೆಯಬೇಕು. ಕೋರ್ಟ್ ಕಮಿಷನರ್ ನೇತೃತ್ವದಲ್ಲಿ ತಜ್ಞರ ಸಮಿತಿ ನೇಮಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದೇ ವೇಳೆ ವಿಎಚ್ ಪಿ ಪರ ವಕೀಲರ ವಾದಕ್ಕೆ ಮಸೀದಿ ಕಮಿಟಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಈ ಮಸೀದಿಗೆ 700 ವರ್ಷಗಳ ಇತಿಹಾಸವಿದ್ದು ಮತ್ತೆ ಅದು ಸರಕಾರಿ ಜಾಗ. ಇಲ್ಲಿ ಯಾವ ದೇವಸ್ಥಾನ ಇತ್ತು ಅಂತ ಸಾಕ್ಷ್ಯ ಒದಗಿಸಲಿ. ಮಳಲಿ‌ ಮುಸ್ಲಿಮರು ಹಲವು ವರ್ಷಗಳಿಂದ ಇಲ್ಲಿ ಅವರ ಧಾರ್ಮಿಕ ಕ್ರಿಯೆ ಮಾಡ್ತಿದ್ದಾರೆ. ನ್ಯಾಯಾಲಯ ಅವರ ಅರ್ಜಿ ವಜಾ ಮಾಡಿ ಮಸೀದಿ ನವೀಕರಣದ ಅನುಮತಿ ‌ಕೊಡಲಿ ಎಂದು ವಾದಿಸಿದರು.

Edited By : Somashekar
Kshetra Samachara

Kshetra Samachara

31/05/2022 05:41 pm

Cinque Terre

6.8 K

Cinque Terre

1

ಸಂಬಂಧಿತ ಸುದ್ದಿ