ಉಡುಪಿ : ರಿಕ್ಷಾದಲ್ಲಿ ಮರೆತು ಹೋಗಿದ್ದ ನಗದು, ಚಿನ್ನಾಭರಣ, ದಾಖಲೆ ಪತ್ರಗಳಿದ್ದ ಬ್ಯಾಗ್‌ನ್ನು ಪೊಲೀಸರ ಮೂಲಕ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ರಿಕ್ಷಾ ಚಾಲಕ ನಝೀರ್ ಎಂಬವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಮಧುಕರ್ ರಾವ್ ಎಂಬವರು ಸೂರತ್‌ನಿಂದ ತಮ್ಮ ಸಂಬಂಧಿಕರ ಆರಕ್ಷತೆ ಕಾರ್ಯಕ್ರಮಕ್ಕಾಗಿ ಉಡುಪಿ ಶಾಮಿಲಿ ಹಾಲ್‌ಗೆ ಮೇ 17ರಂದು ಬಂದಿದ್ದು, ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ 3ಗಂಟೆಗೆ ಆಟೋ ರಿಕ್ಷಾವೊಂದರಲ್ಲಿ ತೆರಳಿದ್ದರು. ಈ ವೇಳೆ ಅವರು ತಮ್ಮ ಲಗೇಜ್‌ನ್ನು ರಿಕ್ಷಾದಲ್ಲಿಯೇ ಮರೆತು ಬಿಟ್ಟು ಹೋಗಿದ್ದರು.
ಆಟೋ ನಿಲ್ದಾಣದ ರಿಕ್ಷಾ ಚಾಲಕ ನಝೀರ್ ಅವರು ಆ ಲಾಗೇಜ್‌ನ್ನು ತನ್ನ ರಿಕ್ಷಾದಲ್ಲಿರುವುದು ಗಮನಿಸಿದರು. ಕೂಡಲೇ ಅದನ್ನು ಅವರು ನಗರ ಠಾಣೆಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ಬ್ಯಾಗಿನಲ್ಲಿ ನಗದು, ಚಿನ್ನಾಭರಣ, ಬಟ್ಟೆ ಬರೆಗಳು ಹಾಗೂ ದಾಖಲೆ ಪತ್ರಗಳಿದ್ದವು. ಆ ಬ್ಯಾಗ್‌ನ್ನು ನಗರ ಪೊಲೀಸ್ ಠಾಣೆಯಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಬ್ರಿಜೇಜ್, ಪೊಲೀಸ್ ಉಪನಿರೀಕ್ಷಕ ವಾಸಪ್ಪ ನಾಯ್ಕ ಸಮಕ್ಷಮ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ವಾರಸುದಾರರಿಗೆ ಹಸ್ತಾಂತರಿಸಿದರು.
Kshetra Samachara
17/05/2022 08:57 pm