ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಅರ್ಧಂಬರ್ಧ ಅಂಗಡಿ ತೆರೆಯಿಸಿ ಸರಕಾರ ಏನು ಸಾಧಿಸಿದೆ?"

ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದು ಹಣ್ಣು-ತರಕಾರಿ, ಮೆಡಿಸಿನ್ ಸಹಿತ ಅಗತ್ಯವಸ್ತು ಬಿಟ್ಟು ಉಳಿದೆಲ್ಲ ಅಂಗಡಿಗಳು ಮುಚ್ಚಿವೆ. ಹೆದ್ದಾರಿಯಲ್ಲಿ ಬೆರಳೆಣಿಕೆಯಷ್ಟು ತಡೆರಹಿತ ಬಸ್ಸುಗಳು ಓಡಾಡಿದ್ದು ಬಿಟ್ಟರೆ, ಉಳಿದಂತೆ ಕಟೀಲು- ಕಿನ್ನಿಗೋಳಿ- ಮೂಡುಬಿದಿರೆಗೆ ಕೆಲವೇ ಬಸ್ಸುಗಳು ಸಂಚರಿಸಿದ್ದು, ಪ್ರಯಾಣಿಕರು ಅತಿ ವಿರಳವಾಗಿದ್ದರು.

ಕಾರ್ನಾಡ್ ಶನಿವಾರದ ಸಂತೆ ರದ್ದಾಗಿದ್ದರೂ ಕೆಲ ವಾಹನಗಳ ಮೂಲಕ ವ್ಯಾಪಾರಸ್ಥರು ಒಳ್ಳೆಯ ತರಕಾರಿ ವ್ಯಾಪಾರ ಮಾಡಿದರು. ಮೀನು ಮಾರುಕಟ್ಟೆಯಲ್ಲಿ ವ್ಯಾಪಾರವಿಲ್ಲದೆ ಮೀನುಗಾರ ಮಹಿಳೆಯರು ಕಂಗಾಲಾಗಿದ್ದು, ವೀಕೆಂಡ್ ಕರ್ಫ್ಯೂ ನಲ್ಲಿ ಅರ್ಧಂಬರ್ಧ ಅಂಗಡಿಗಳನ್ನು ತೆರೆಯುವ ಮೂಲಕ ಸರಕಾರ ಏನು ಸಾಧಿಸಿದೆ? ಬಂದ್‌ ಮಾಡುವುದಾದರೆ ಎಲ್ಲವನ್ನೂ ಬಂದ್‌ ಮಾಡಿ. ಈ ತಾರತಮ್ಯವೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಪ್ಪನಾಡು ದೇವಸ್ಥಾನದಲ್ಲಿ ಭಕ್ತರು ವಿರಳವಾಗಿ ಕಂಡುಬಂದರು. ಹಳೆಯಂಗಡಿ, ಕಿನ್ನಿಗೋಳಿ, ಅತಿಕಾರಿಬೆಟ್ಟು, ಪಕ್ಷಿಕೆರೆ, ಪಡುಪಣಂಬೂರು ಪರಿಸರದಲ್ಲಿ ಕರ್ಫ್ಯೂ ಯಶಸ್ವಿಯಾಗಿದೆ.

Edited By : Nagesh Gaonkar
Kshetra Samachara

Kshetra Samachara

08/01/2022 05:32 pm

Cinque Terre

20.18 K

Cinque Terre

2

ಸಂಬಂಧಿತ ಸುದ್ದಿ