ಮಂಗಳೂರು: ನಗರ ಕಮಿಷನರೇಟ್ ನ 133 ಕಾನ್ ಸ್ಟೇಬಲ್ ಗಳು ಹೆಡ್ ಕಾನ್ ಸ್ಟೇಬಲ್ ಗಳಾಗಿ ಭಡ್ತಿ ಪಡೆದಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಹಾಗೂ ಪೊಲೀಸ್ ಅಧಿಕಾರಿಗಳು ತಮ್ಮ ಕಚೇರಿ ಮುಂಭಾಗ ಅವರಿಗೆ ಬ್ಯಾಡ್ಜ್ ನೀಡುವ ಮೂಲಕ ಪ್ರಕ್ರಿಯೆ ನಡೆಸಿದರು.
ಮಂಗಳೂರು ಕಮಿಷನರೇಟ್ ಅಸ್ತಿತ್ವಕ್ಕೆ ಬಂದ 11 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ 113 ಮಂದಿ ಕಾನ್ ಸ್ಟೇಬಲ್ ಗಳು ತಮ್ಮ ಕರ್ತವ್ಯ ಅವಧಿಯ 5 ವರ್ಷ 10 ದಿನಗಳಲ್ಲಿಯೇ ಭಡ್ತಿ ಪಡೆದಿದ್ದಾರೆ. ದ.ಕ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರುವವರ ಸಂಖ್ಯೆ ಕಡಿಮೆಯಿದ್ದು, ಇದು ಸೇರ್ಪಡೆಯಾಗುವವರಿಗೆ ಪ್ರೇರಣೆಯಾಗಲಿದೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಕಳೆದ 10 ವರ್ಷಗಳ ಅವಧಿಯಲ್ಲಿ ಮಂಗಳೂರು ಕಮಿಷನರೇಟ್ ನಲ್ಲಿ 1,400 ಕ್ಕೂ ಅಧಿಕ ಮಂದಿಯ ನೇಮಕಾತಿಯಾಗಿದೆ. ಆದರೆ, ಅದರಲ್ಲಿ ದ.ಕ.ಜಿಲ್ಲೆಯವರು ಕೇವಲ 68 ಮಂದಿ ಮಾತ್ರ. ಆದ್ದರಿಂದ ಬೇರೆ ಯಾವ ಜಿಲ್ಲೆಯಲ್ಲೂ ಇಷ್ಟು ಬೇಗ ಭಡ್ತಿ ದೊರೆಯುವುದಿಲ್ಲ. ಆದರೆ, ದ.ಕ.ಜಿಲ್ಲೆಯ ಜನತೆ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳಲು ಪ್ರೇರೇಪಿಸಲು ಇಷ್ಟು ಬೇಗ ಭಡ್ತಿ ನೀಡಲಾಗುತ್ತಿದೆ ಎಂದರು.
Kshetra Samachara
28/11/2021 09:19 pm