ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಬಕ: ರಾತ್ರಿ ಬೆಳಗಾಗುವುದರೊಳಗೆ ಗೂಡ್ಸ್ ವಾಹನ ಪಾರ್ಕಿಂಗ್ ಜಾಗವೇ 'ಮಾಯ!'

ಪುತ್ತೂರು: ಇದು ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ ಕಳೆದ 20 ವರ್ಷಗಳಿಂದ ಗೂಡ್ಸ್ ವಾಹನಗಳು ಪಾರ್ಕ್ ಮಾಡುತ್ತಿದ್ದ ಜಾಗ. ಆದರೆ, ರಾತ್ರಿ ಬೆಳಗಾಗುವುದರೊಳಗೆ ಈ ಜಾಗಕ್ಕೆ ಮಣ್ಣು, ಬೇಲಿ ಹಾಕಿ ಅತಿಕ್ರಮಿಸಿಕೊಳ್ಳಲಾಗಿದೆ!

ಪುತ್ತೂರು- ಕಾಸರಗೋಡು ರಾಜ್ಯ ಹೆದ್ದಾರಿಯಲ್ಲಿ ಬರುವ ಕಬಕ ಜಂಕ್ಷನ್ ಬಳಿಯೇ ಈ ಗೂಡ್ಸ್ ವಾಹನಗಳ ಪಾರ್ಕಿಂಗ್ ಜಾಗವಿದ್ದು, ಏಕಾಏಕಿ ಈ ರೀತಿ ಅತಿಕ್ರಮಣ ನಡೆದಿರುವುದು ಸಾರ್ವಜನಿಕರಿಗೆ ಅಚ್ಚರಿ, ಆಕ್ರೋಶಕ್ಕೂ ಕಾರಣವಾಗಿದೆ.

ಜಿಪಂ ಮತ್ತು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ 12 ಸೆಂಟ್ಸ್ ಜಾಗದಲ್ಲಿ ಪಿಕಪ್ ಮತ್ತಿತರ ಗೂಡ್ಸ್ ವಾಹನಗಳು ಪಾರ್ಕಿಂಗ್ ಮಾಡಿಕೊಂಡಿದ್ದವು.

ಈ ಪಾರ್ಕಿಂಗ್ ಗೆ ಸ್ಥಳೀಯ ಕಬಕ ಗ್ರಾಪಂ ಕೂಡ ಅನುಮತಿ ನೀಡಿತ್ತು. ಆದರೆ, ಏಕಾಏಕಿ ಈ ಸರಕಾರಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ಪ್ರಶ್ನಿಸಿ ಸ್ಥಳೀಯ ಪಿಕಪ್ ವಾಹನ ಚಾಲಕರು ಹಾಗೂ ಸ್ಥಳೀಯರು ಕಬಕ ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಜಿಪಂ ಇಂಜಿನಿಯರ್ ಹಾಗೂ ಶಾಸಕರಿಗೂ ಮನವಿ ನೀಡಿದ್ದಾರೆ. ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಆಗಮಿಸಿ ಅತಿಕ್ರಮಣವಾದ ಸ್ಥಳದ ಸರ್ವೆ ನಡೆಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಪಂಚಾಯಿತಿ ಜಾಗದ ಸರ್ವೆ ನಡೆಸಿದ್ದು, ಇದರಲ್ಲಿ ಅತಿಕ್ರಮಿಸಿದ ಸ್ಥಳ ಸರಕಾರಿ ಜಾಗವೆಂದೂ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹಾಕಲಾದ ತಂತಿ ಬೇಲಿ, ಮಣ್ಣನ್ನು ಕೂಡಲೇ ತೆರವುಗೊಳಿಸುವಂತೆ ಶಾಸಕರು ಪಂ. ಅಧಿಕಾರಿಗಳಿಗೆ ಸೂಚಿಸಿದ್ದರೂ, ಅತಿಕ್ರಮಣ ತೆರವು ಕಾರ್ಯ ನಡೆದಿಲ್ಲ ಎನ್ನುತ್ತಾರೆ ಪಿಕ್ಅಪ್ ಚಾಲಕ ಪುರುಷೋತ್ತಮ್.

Edited By : Nagesh Gaonkar
Kshetra Samachara

Kshetra Samachara

10/11/2021 10:27 pm

Cinque Terre

13.38 K

Cinque Terre

0

ಸಂಬಂಧಿತ ಸುದ್ದಿ