ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಮ್ರಾಲ್: ಕಳ್ಳತನ, ದರೋಡೆಗೆ ಮುಖ್ಯ ಕಾರಣ ನಿರುದ್ಯೋಗ; ನ್ಯಾಯಮೂರ್ತಿ ಮಮ್ತಾಜ್

ಮುಲ್ಕಿ: ಜನರಿಗೆ ಕಾನೂನು ಅರಿವು ಇಲ್ಲದೆ ಕೆಲವೊಂದು ಸಮಸ್ಯೆಗಳು ಬರುತ್ತದೆ. ಕಳ್ಳತನ, ದರೋಡೆಗೆ ಮುಖ್ಯ ಕಾರಣ ನಿರುದ್ಯೋಗ ಎಂದು ಜಿಲ್ಲಾ ನ್ಯಾಯಮೂರ್ತಿ ಮಮ್ತಾಜ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ವಿರೋಧಿ ಸಂಸ್ಥೆ ದೆಹಲಿ, ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿ ಕಿನ್ನಿಗೋಳಿ ಮತ್ತು ಕೆಮ್ರಾಲ್ ಪಂಚಾಯತ್ ಇವರ ಆಶ್ರಯದಲ್ಲಿ ಕಾನೂನು ಅರಿವು ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, 'ಜನ ಬದಲಾಗಬೇಕು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೋರಾಡಬೇಕು. ಅದಕ್ಕೆ ನಮ್ಮ ನಡತೆ ಸರಿಯಾಗಿರಬೇಕು' ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯ ಮೂರ್ತಿ ಮಮ್ತಾಜ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಮಹಮ್ಮದ್ ಬಾಷಾ, ಕೆಮ್ರಾಲ್ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಉಪಾಧ್ಯಕ್ಷ ಸುರೇಶ್ ಪಂಜ, ಸದಸ್ಯ ನವೀನ್ ಪಂಜ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/10/2021 10:34 am

Cinque Terre

3.11 K

Cinque Terre

1

ಸಂಬಂಧಿತ ಸುದ್ದಿ