ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ದುರ್ಗಾ ದೌಡ್' ಆಯೋಜಕರ ಮೇಲೆ ಪ್ರಕರಣ ದಾಖಲು

ಉಡುಪಿ: ಉಡುಪಿಯಲ್ಲಿ ನಿನ್ನೆ ನಡೆದ 'ದುರ್ಗಾ ದೌಡ್' ನ ಆಯೋಜಕರ ಮೇಲೆ ಎಪಿಡೆಮಿಕ್ ಆ್ಯಕ್ಟ್ ಪ್ರಕಾರ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ದೂರು ದಾಖಲಿಸಿಕೊಳ್ಳಲಾಗಿದೆ.

ಕಾರ್ಯಕ್ರಮದಿಂದ

ಕೋವಿಡ್ ಸೋಂಕು ತಡೆಗಟ್ಟುವ ಕುರಿತಾದ ಡಿ.ಸಿ. ಆದೇಶ ಉಲ್ಲಂಘಿಸಲಾಗಿದೆ. ಈ ಹಿನ್ನೆಲೆಯಲ್ಲಿ

ಪೌರಾಯುಕ್ತರ ದೂರಿನ ಮೇರೆಗೆ ಇಂದು ನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಈ ಕಾರ್ಯಕ್ರಮವನ್ನು ಶುಕ್ರವಾರ ಹಿಂದೂ ಜಾಗರಣ ವೇದಿಕೆ ಆಯೋಜಿಸಿತ್ತು.

ವಿಜಯದಶಮಿ ದಿನ ನಡೆದಿದ್ದ ದುರ್ಗಾ ದೌಡ್ ನಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.

ಪೂರ್ವಾನುಮತಿ ಇಲ್ಲದೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಮನಾರ್ಹ ಸಂಗತಿ ಎಂದರೆ

ಸಚಿವ ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್ ಕೂಡ ಭಾಗಿಯಾಗಿದ್ದರು!

Edited By : Nagesh Gaonkar
Kshetra Samachara

Kshetra Samachara

17/10/2021 08:27 pm

Cinque Terre

27.78 K

Cinque Terre

4

ಸಂಬಂಧಿತ ಸುದ್ದಿ