ಬಂಟ್ವಾಳ: ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್ ಅವರು ಡಿ.ವೈ.ಎಸ್.ಪಿ.ಯಾಗಿ ಪದೋನ್ನತಿ ಹೊಂದಿ ವರ್ಗಾವಣೆ ಯಾಗಿದ್ದಾರೆ.
ಲೋಕಾಯುಕ್ತ ಇಲಾಖೆಯ ಡಿ.ವೈ.ಎಸ್.ಪಿ.ಯಾಗಿ ಇಂದು ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ ಅವರು ದ.ಕ.ಉಡುಪಿ ಮತ್ತು ಕಾರವಾರ ಮೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಮಂಗಳೂರು ಡಿ.ಸಿ.ಐ.ಬಿ.ಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಚೆಲುವರಾಜ್ ಅವರು ಇತ್ತೀಚೆಗೆ ಬಂಟ್ವಾಳ ನಗರ ಪೋಲೀಸ್ ಠಾಣೆ ಮೇಲ್ದರ್ಜೆಗೆ ಏರಿದ ಸಂದರ್ಭದಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಪೋಲೀಸ್ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆ ಗೊಂಡಿದ್ದರು.ಇದೀಗ ಡಿ.ವೈ.ಎಸ್.ಪಿ.ಯಾಗಿ ಪದೋನ್ನತಿ ಹೊಂದಿ ಲೋಕಾಯುಕ್ತಕ್ಕೆ ವರ್ಗಾವಣೆ ಆಗಿದ್ದಾರೆ.
ಬಂಟ್ವಾಳ ನಗರ ಠಾಣೆಗೆ ಪೋಲೀಸ್ ಇನ್ಸ್ ಪೆಕ್ಟರ್ ಬರುವವರೆಗೆ ಪೋಲೀಸ್ ಇನ್ಸ್ ಪೆಕ್ಟರ್ ಆಗಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರಿಗೆ ಚಾರ್ಜ್ ನೀಡಲಾಗಿದ್ದು, ಸಂಚಾರಿ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಾಗಿಯೂ ಇವರೇ ಕರ್ತವ್ಯ ನಿರ್ವಹಿಸಲಿದ್ದಾರೆ. ಬಂಟ್ವಾಳ ನಗರ ಠಾಣಾ ಎಸ್. ಐ.ಅಗಿ ಅವಿನಾಶ್ ಕರ್ತವ್ಯ ದಲ್ಲಿದ್ದಾರೆ.
Kshetra Samachara
16/09/2021 07:23 pm