ಉಡುಪಿ: ಮಣಿಪಾಲ ಠಾಣೆಯ ಪೊಲೀಸರು ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಣಿಪಾಲ ಪೊಲೀಸರು ವಶಪಡಿಸಿಕೊಂಡ ಕರ್ಕಶ ಶಬ್ದ ಮಾಲಿನ್ಯ ಮಾಡುವ 51 ಸೈಲೆನ್ಸ ರ್ ಗಳನ್ನು ನೆಲಸಮಗೊಳಿಸಿದ್ದಾರೆ. ಇಂದು ಬುಲ್ಡೋಜರ್ ಮೂಲಕ ಅವುಗಳನ್ನು ಅನುಪಯುಕ್ತಗೊಳಿಸಲಾಯಿತು. ಮಾತ್ರವಲ್ಲ, ವಾಹನ ಸವಾರರಿಂದ 25,500 ರೂ. ದಂಡ ವಸೂಲಿಯನ್ನೂ ಮಾಡಿ ಖಡಕ್ ವಾರ್ನಿಂಗ್ ಮಾಡಿದ್ದಾರೆ.
Kshetra Samachara
04/02/2021 10:07 pm