ಉಡುಪಿ: ಕೊರೊನಾದಿಂದಾಗಿ ಹೊಸ ವರ್ಷಾಚರಣೆ ಬಹು ಸಪ್ಪೆಯಾಗಲಿದೆ.
ಪೆಗ್ ಏರಿಸಿಕೊಂಡು ಬೀಚ್ ನಲ್ಲಿ ಹೊಸ ವರ್ಷ ಎಂಜಾಯ್ ಮಾಡುತ್ತಿದ್ದ ಮಂದಿಗೆ ಈ ಬಾರಿ ಅಂತಹ ಅವಕಾಶ ಸಿಗಲ್ಲ. ಯಾಕಂದ್ರೆ ಉಡುಪಿಯ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಬೀಚ್ ನಲ್ಲಿ ಹಾಗೂ ಹೊಟೇಲ್ ಗಳಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸುವುದನ್ನು ನಿಷೇಧಿಸಿದೆ.
ಕಳೆದ ವರ್ಷ ನ್ಯೂ ಇಯರನ್ನು ಹೊಟೇಲ್ ಗಳಲ್ಲಿ, ಬೀಚ್ ಗಳಲ್ಲಿ ಸಖತ್ ಎಂಜಾಯ್ ಮಾಡಿದ ಮಂದಿಗೆ ಈ ಬಾರಿ ಕೊರೊನಾ ಬ್ರೇಕ್ ನೀಡಿದೆ. ಜಿಲ್ಲೆಯ ಪ್ರತಿಷ್ಠಿತ ಹೊಟೇಲ್ ಗಳು ನ್ಯೂ ಇಯರ್ ಸೆಲೆಬ್ರೆಶನ್ ಮಾಡುವಂತಿಲ್ಲ, ಬೀಚ್ ಗಳಿಗೆ ಪ್ರವಾಸಿಗರು ಸಂದರ್ಶಿಸಿದರೂ ಸೆಲೆಬ್ರೆಶನ್ ನಡೆಸುವಂತಿಲ್ಲ. ಯಾವುದೇ ಕಾರ್ಯಕ್ರಮ ಆಯೋಜಿಸುವುದನ್ನೂ ನಿಷೇಧಿಸಲಾಗಿದ್ದು, ಇದು ಉಡುಪಿ ಜಿಲ್ಲೆಯ ಇತರ ಬೀಚ್ ಗಳಿಗೂ ಅನ್ವಯವಾಗಲಿದೆ.
Kshetra Samachara
31/12/2020 11:56 am