ಮಂಗಳೂರು: ಬಿಎಸ್ ವೈ ಸರಕಾರದಿಂದ ಪವರ್ ಟಿವಿ ನೇರಪ್ರಸಾರ ಸ್ಥಗಿತ ವಿಚಾರಕ್ಕೆ ಸಂಬಂಧಪಟ್ಟಂತೆ ಕರಾವಳಿಯಲ್ಲೂ ತೀವ್ರ ಖಂಡನೆ ವ್ಯಕ್ತವಾಗಿದೆ.
ಪವರ್ ಟಿವಿ ನೇರಪ್ರಸಾರ ಸ್ಥಗಿತಗೊಳಿಸಿದ ಸರಕಾರದ ಕ್ರಮದ ವಿರುದ್ಧ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ತಕ್ಷಣವೇ ಪವರ್ ಟಿವಿ ಸ್ಥಗಿತಕ್ಕೆ ಕಾರಣವಾದ ನಿಲುವಿನಿಂದ ಸರಕಾರ ಹಿಂದೆ ಸರಿದು, ವಾಹಿನಿಯ ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಿಎಂ ಅವರಿಗೆ ಒತ್ತಾಯಿಸಲಾಯಿತು. ಅಲ್ಲದೆ, ಈ ರೀತಿಯ ಕ್ರಮ ಪ್ರಜಾಪ್ರಭುತ್ವ ಮೌಲ್ಯಕ್ಕೆ ಅಪಚಾರ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ತಾರನಾಥ ಗಟ್ಟಿ ಖಂಡಿಸಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಗೌರವಾಧ್ಯಕ್ಷ ಶರೀಫ್ ಜಟ್ಟಿಪಳ್ಳ, ಸುಳ್ಯ ಘಟಕ ಪ್ರಧಾನ ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ, ಸಂಘಟನೆ ಕಾರ್ಯದರ್ಶಿಗಳಾದ ವೈಲೆಟ್ ಪಿರೇರಾ ಮತ್ತು ಕೆನ್ವಿಟ್ ಜೆ. ಪಿಂಟೋ ಮತ್ತು ಸದಸ್ಯರಾದ ಕುಶಾಂತ್, ಪವರ್ ಟಿವಿ ಮಂಗಳೂರು ವರದಿಗಾರ ಇರ್ಷಾದ್ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
30/09/2020 09:57 am