ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದ್ವಿಸದಸ್ಯ ಪೀಠದ ಹಿಜಾಬ್ ಕುರಿತ ತೀರ್ಪು ಗೊಂದಲ ಮೂಡಿಸಿದೆ: ಶ್ರೀರಾಮ‌ಸೇನೆ

ಉಡುಪಿ: ಸುಪ್ರೀಂ ಕೋರ್ಟ್ ನ ಹಿಜಾಬ್ ಕುರಿತ ತೀರ್ಪಿಗೆ ನಮ್ಮ ಭಿನ್ನಾಭಿಪ್ರಾಯ ಇಲ್ಲ. ದೇಶದ ಪ್ರಜೆಗಳಾಗಿ‌ ತೀರ್ಪನ್ನು ಗೌರವಿಸುತ್ತೇವೆ. ಆದರೆ ದ್ವಿಸದಸ್ಯ ಪೀಠದ ತೀರ್ಪು ಗೊಂದಲ ಮೂಡಿಸಿದೆ ಎಂದು ಶ್ರೀರಾಮ‌ಸೇನೆ ಮುಖಂಡ ಮೋಹನ್ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮುಂದಿನ ಮುಖ್ಯ ನ್ಯಾಯಾಧೀಶರ ಪೀಠದಲ್ಲಿ ಹಿಜಾಬ್ ವಿರುದ್ದವೇ ತೀರ್ಪು ಬರುತ್ತದೆ. ಶಾಲೆಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅದರದ್ದೇ ಆದ ಕಾನೂನು ಇದೆ. ಸರಕಾರ ವಿದ್ಯಾರ್ಥಿಗಳಲ್ಲಿ ಭೇದ ಭಾವ ಬರಬಾರದು ಎಂಬ ಕಾರಣಕ್ಕಾಗಿ ಇದನ್ನು ಮಾಡಿದ್ದಾರೆ. ಪಿಎಫ್ಐ ಬೇಕೆಂದೇ ಇದನ್ನು ಎಬ್ಬಿಸಿದೆ ಎಂಬ ಬಗ್ಗೆ ಸಂಶಯ ಇದೆ ಎಂದು ಹೇಳಿದ್ದಾರೆ.

ನಮ್ಮ ದೇವಾಲಯಗಳನ್ನು ನಾಶ ಮಾಡಿ ಮಸೀದಿ ಕಟ್ಟಿದ್ದಾರೆ ಎಂದ ಅವರು, ವಕ್ಫ್ ಬೋರ್ಡ್ ಮೂಲಕ ಗ್ರಾಮಗಳನ್ನೇ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆಗುತ್ತಿದೆ. ಶಾಲೆಗಳನ್ನು ಕೂಡಾ ಕಂಟ್ರೋಲ್ ಮಾಡಲು ಹೊರಟಿದ್ದಾರೆ. ಅಲ್ಲೂ ಧರ್ಮದ ವಿಷ ಬೀಜವನ್ನು ಬಿತ್ತಿ‌ ಕೋಮುವಾದವನ್ನು ಬಿತ್ತಲು ಪ್ರಯತ್ನ ಮಾಡುತ್ತಿದ್ದಾರೆ.

ಶಾಲೆಗಳಲ್ಲಿ ಭೇದ ಭಾವ ಬರಬಾರದು ಎಂಬ ಕಾರಣಕ್ಕೆ ಇಂದಿರಾ ಗಾಂಧಿಯವರು ಸಮವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದರು. ಇದರ ಉದ್ದೇಶ ಶಾಲೆಗಳಲ್ಲಿ ಸಮಾನತೆಯಲ್ಲಿ ವಿದ್ಯಾರ್ಥಿಗಳು ಇರಬೇಕು ಎಂಬ ಕಾರಣಕ್ಕೆ . ಹಿಜಾಬ್ ಧರ್ಮದ ಅವಿಭಾಜ್ಯ ಅಂಗ ಎಂಬುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ಅದನ್ನು ಅವರಿಗೆ ಬೇಕಾದಲ್ಲಿ ಪಾಲಿಸಲಿ. ಶಾಲೆಯ ಒಳಗೆ ಬೇಡ ಎನ್ನುವುದು ಸರಕಾರ ಮತ್ತು ನಮ್ಮ ವಾದ ಎಂದು ಹೇಳಿದ್ದಾರೆ.

Edited By : Somashekar
Kshetra Samachara

Kshetra Samachara

13/10/2022 06:02 pm

Cinque Terre

9.52 K

Cinque Terre

0

ಸಂಬಂಧಿತ ಸುದ್ದಿ