ಪುತ್ತೂರು: ಸೇವಾ ವಿಚಾರದಲ್ಲಿ ತಾರತಮ್ಯ, ಅಸಮಾನತೆ, ಕಡತ ವಿಲೇವಾರಿ ಮಾಡದೇ ಇರುವುದು ಸೇರಿದಂತೆ ಹಕ್ಕುಗಳ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಸರಕಾರಿ ಮತ್ತು ಅರೆ ಸರಕಾರಿ ವಿಶೇಷಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಶಿಕ್ಷಕ ಶಿವಪ್ಪ ರಾಥೋಡ್ ಅವರು ನ್ಯಾಯ ಕೊಡುವಂತೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಜೂ.18ರಂದು ಮೌನ ಧರಣಿ ಆರಂಭಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮುಂದೆ ಚಾಪೆ ಹಾಕಿ ಕೂತು ಕೊಂಡು ‘ನನ್ನ ಹಕ್ಕು- ನನ್ನ ನಡೆ...’ ಘೋಷವಾಕ್ಯದ ಅಡಿಯಲ್ಲಿ ಮೌನ ಧರಣಿ ಆರಂಭಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ನನ್ನ ಸೇವಾ ಅವಧಿಯಲ್ಲಿರುವ ವಿಚಾರಗಳನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ವಿಶೇಷಚೇತನ ಹಕ್ಕುಗಳ 2016ರ ಕಾಯ್ದೆ ಪ್ರಕಾರ ಸಂವಿಧಾನಬದ್ಧವಾಗಿ ಸಾಮಾನ್ಯ ಅರ್ಜಿಗಳನ್ನು ಕಚೇರಿಗೆ ನೀಡಿದಾಗ ನನಗೆ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
Kshetra Samachara
17/06/2022 01:15 pm