ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಮಳೆನೀರ ಹರಿವಿನ ಪೈಪ್‌ ಬ್ಲಾಕ್; ಯುಪಿಸಿಎಲ್ ಅವಾಂತರದಿಂದ ಕೃಷಿ ನಾಶ, ರೈತರ ಆಕ್ರೋಶ

ಕಾಪು: ಮಳೆನೀರು ಹರಿದು ಹೋಗುತ್ತಿದ್ದ ಬೃಹತ್ ಕಾಲುವೆಗಳನ್ನು ಮುಚ್ಚಿ, ನೀರು ಹರಿಯಲು ಕಿರಿದಾದ ಪೈಪ್ ಅಳವಡಿಸಿದ್ದರಿಂದಾಗಿ ಆ ಪೈಪ್ ನಲ್ಲಿ ಕಸಕಡ್ಡಿ ಸಿಲುಕಿ ನೀರು ಬ್ಲಾಕ್ ಆಗಿದ್ದರ ಪರಿಣಾಮ ಕೃಷಿ ಗದ್ದೆಗಳಲ್ಲಿ ನೀರು ನಿಂತು ಕೃಷಿ ನಾಶವಾಗಿದೆ ಹಾಗೂ ವಾಸದ ಮನೆಗಳಿಗೂ ಹಾನಿ ಆಗುತ್ತಿದೆ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ತೆಂಕ ಗ್ರಾಪಂ ವ್ಯಾಪ್ತಿಯ ಮಸೀದಿಯ ಹಿಂಭಾಗದ ಗದ್ದೆ ಪ್ರದೇಶದಲ್ಲಿ ಯುಪಿಸಿಎಲ್ ಕಂಪನಿಯು ಮಾಡಿದ ಅವಾಂತರದಿಂದ ಸುಮಾರು 15 ಮನೆಯ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಗ್ರಾಪಂ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Edited By : Somashekar
Kshetra Samachara

Kshetra Samachara

20/07/2022 06:45 pm

Cinque Terre

8.58 K

Cinque Terre

2

ಸಂಬಂಧಿತ ಸುದ್ದಿ