ಉಡುಪಿ: ಕಾಲೇಜು ಆಡಳಿತ ಮಂಡಳಿ ಪರವಾಗಿ ಇವತ್ತಿನ ತೀರ್ಪು ಬರಬಹುದು ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಹೈಕೋರ್ಟ್ ಹಿಜಾಬ್ ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ಅವರು, ಹಿಜಾಬ್ ವಿವಾದ ಇದೇ ಕಾಲೇಜಿನಲ್ಲಿ ಆರಂಭಗೊಂಡಿತ್ತು. ಯಾವುದೇ ಧಾರ್ಮಿಕ ಆಚರಣೆಗೆ ಶಿಕ್ಷಣ ಸಂಸ್ಥೆಯಲ್ಲಿ ಅವಕಾಶ ಇಲ್ಲ.
ಹೈಕೋರ್ಟ್ ನ ಮಧ್ಯಂತರ ತೀರ್ಪಿನಲ್ಲಿ ಅದು ಉಲ್ಲೇಖ ಆಗಿದೆ. ಮತಾಂಧ ಶಕ್ತಿಗಳ ದೇಶದ್ರೋಹಿ ಸಂಘಟನೆಯ ಕುಮ್ಮಕ್ಕಿನಿಂದ ವಿವಾದ ವ್ಯಾಪಿಸಿತು. ಒಂದು ಕಾಲೇಜಿನ ವಿಚಾರ ದೇಶ ಮಟ್ಟದಲ್ಲಿ ಚರ್ಚೆ ಆಯಿತು.
ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಿಜಾಬ್ ವಿವಾದದಿಂದ ಸಮಸ್ಯೆಯಾಗಿದೆ. ಹೈಕೋರ್ಟ್ ಶಿಕ್ಷಣಕ್ಕೆ ಒತ್ತು ಕೊಡುವ ತೀರ್ಪು ಕೊಡುವ ನಿರೀಕ್ಷೆಯಿದೆ ಎಂದು ಯಶ್ ಪಾಲ್ ಹೇಳಿದ್ದಾರೆ.ಅಂದಹಾಗೆ ಯಶ್ ಪಾಲ್ ಉಡುಪಿ ಬಿಜೆಪಿಯ ಮುಖಂಡರೂ ಹೌದು.
Kshetra Samachara
15/03/2022 09:29 am