ಉಡುಪಿ: ಬೀಡಿನಗುಡ್ಡೆ ಇಲ್ಲಿಯ, ನಗರ ವಸತಿರಹಿತರ ಆಶ್ರಯ ಕೇಂದ್ರದಲ್ಲಿ ಅವ್ಯವಸ್ಥೆ ಇರುವುದರ ಬಗ್ಗೆ , ದೂರುಗಳು ಬಂದಿದ್ದವು. ಆ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದ ಆದೇಶದ ಮೆರೆಗೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಧೀಶೆ ಶರ್ಮಿಳಾ ಎಸ್ ಅವರು, ಪುರ್ನವಸತಿ ಕೇಂದ್ರಕ್ಕೆ ಶುಕ್ರವಾರ ಭೇಟಿನೀಡಿ ಪರಿಶೀಲಿಸಿದರು. ಅಸಮರ್ಪಕ ವ್ಯವಸ್ಥೆಗಳು ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಸುವ್ಯವಸ್ಥೆ ಕಾಪಾಡುವಂತೆ ಸಲಹೆವಿತ್ತರು. ಈ ಸಂದರ್ಭದಲ್ಲಿ ಎಫ್.ಡಿ.ಎ ಅನಿಲ್, ಪ್ರಾಧಿಕಾರದ ಕಾನೂನು ಸ್ವಯಂಸೇವಕ ನಿತ್ಯಾನಂದ ಒಳಕಾಡು ಸ್ಥಳದಲ್ಲಿದ್ದರು.
Kshetra Samachara
14/08/2021 12:15 pm