ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಿಲಾಗ್ರಿಸ್ ಕಾಲೇಜಿನಲ್ಲಿ ಹೈಡ್ರಾಮಾ: ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತ ವಿದ್ಯಾರ್ಥಿಗಳು!

ವರದಿ: ರಹೀಂ ಉಜಿರೆ

ಉಡುಪಿ: ಉಡುಪಿಯ ಕಲ್ಯಾಣಪುರ ದಲ್ಲಿರುವ ಮಿಲಾಗ್ರಿಸ್ ಕಾಲೇಜಿನಲ್ಲಿ ಇವತ್ತು ಹೈಡ್ರಾಮಾ ನಡೆಯಿತು.ಇಲ್ಲಿನ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ನ್ಯಾಯಾಲಯದ ಆದೇಶದಂತೆ ಎರಡು ದಿನಗಳಿಂದ ತರಗತಿಗೆ ಪ್ರವೇಶ ನೀಡಿರಲಿಲ್ಲ ಇವತ್ತು ಕೂಡ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿ ಹಿಜಾಬ್ ಧರಿಸಿ ಒಳ ಬಿಡುವಂತೆ ಹೇಳಿದ್ದಾರೆ.ಆದರೆ ಕಾಲೇಜು ಶಿಕ್ಷಕ ವರ್ಗ ಇವರಿಗೆ ತರಗತಿಗೆ ಪ್ರವೇಶ ನೀಡಿರಲಿಲ್ಲ.

ಇಷ್ಟು ಹೊತ್ತಿಗೆ ಕಾಲೇಜಿನಿಂದ ಹೊರ ಬಂದ ವಿದ್ಯಾರ್ಥಿನಿಯರು ಮೌನ ಪ್ರತಿಭಟನೆಗೆ ಮುಂದಾದರು.ಈ ವೇಳೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕೂಡ ಕಾಲೇಜಿನ ಹೊರಬಂದು ವಿದ್ಯಾರ್ಥಿನಿಯರಿಗೆ ಸಾಥ್ ನೀಡಿದರು. ಕಳೆದ ಮೂರು ದಿನಗಳಿಂದ ಪ್ರಿಪರೇಟರಿ ಪರೀಕ್ಷೆ ನಡೆಯುತ್ತಿದೆ. ಆದರೆ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನೀಡುತ್ತಿಲ್ಲ. ಹೀಗಾಗಿ ಅವರ ಬೆಂಬಲಕ್ಕೆ ನಾವು ಕೂಡ ತರಗತಿ ಬಹಿಷ್ಕರಿಸಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದರು. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು

Edited By : Nagesh Gaonkar
PublicNext

PublicNext

18/02/2022 05:18 pm

Cinque Terre

48.57 K

Cinque Terre

5

ಸಂಬಂಧಿತ ಸುದ್ದಿ