ಮುಲ್ಕಿ: ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ತೋಕೂರು ಗೋಮಾಳ ಸಮೀಪದ ಗುಡ್ಡೆ ಪ್ರದೇಶದ ಖಾಸಗಿ ಜಾಗದಲ್ಲಿ ಕೆಲ ವ್ಯಕ್ತಿಗಳು ಜೆಸಿಬಿ ಮೂಲಕ ಹೊಂಡ ತೋಡಿ ಮಣ್ಣು ಮುಚ್ಚಿದ ಬಗ್ಗೆ ಸ್ಥಳೀಯರಿಗೆ ಆತಂಕ ಉಂಟಾಗಿ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಪಕ್ಷಿಕೆರೆ ಸಮಿಪದ ತೋಕೂರು ಗುಡ್ಡೆ ಖಾಸಗಿ ಪ್ರದೇಶದಲ್ಲಿ ಜನಸಂಚಾರ ವಿರಳವಾಗಿರುವ ಕಡೆ ಕೆಲ ವ್ಯಕ್ತಿಗಳು ಜೆಸಿಬಿ ಮೂಲಕ ಎರಡು ಕಡೆ ಹೊಂಡ ತೋಡಿದ್ದು ಬಳಿಕ ಮುಚ್ಚಿದ್ದಾರೆ. ಈ ಪ್ರದೇಶದಲ್ಲಿ ದನವನ್ನು ಗುಡ್ಡೆಯಲ್ಲಿ ಮೇಯಲು ಬಿಡುವ ವೇಳೆ ನೋಡಿದ ಸ್ಥಳೀಯರು ಕೂಡಲೇ ಮಾಜೀ ಪಂಚಾಯತ್ ಸದಸ್ಯ ವಿನೋದ್ ಸಾಲ್ಯಾನ್ ಬೆಳ್ಳಾಯರು ರವರಿಗೆ ತಿಳಿಸಿದ್ದಾರೆ. ಅವರು ಪಡುಪಣಂಬೂರು ಪಂಚಾಯತ್ ವಿ ಎ ಮೋಹನ್ ರವರಿಗೆ ದೂರು ನೀಡಿದ್ದು ಅವರು ಮಾಜೀ ಪಂ. ಸದಸ್ಯ ಹೇಮನಾಥ ಅಮೀನ್ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಎಕರೆಗಟ್ಟಲೆ ಗುಡ್ಡೆ ಪ್ರದೇಶದ ನಿರ್ಜನ ಜಾಗದಲ್ಲಿ ಏಕಾಏಕಿ ಎರಡು ಹೊಂಡಗಳನ್ನು ತೋಡಿ ಮುಚ್ಚಿರುವ ಬಗ್ಗೆ ಅನೇಕ ಅನುಮಾನಗಳು ಹುಟ್ಟಿಕೊಂಡು ಮುಲ್ಕಿ ಪೊಲೀಸರು ಹಾಗೂ ಮುಲ್ಕಿ ತಹಶೀಲ್ದಾರರಿಗೆ ದೂರು ನೀಡಿ ಬಳಿಕ ಸ್ಥಳೀಯ ಜಾಗದ ಮಾಲೀಕರನ್ನು ಸಂಪರ್ಕಿಸಿದ್ದಾರೆ. ಜಾಗದ ಮಾಲೀಕರು ಸ್ಪಷ್ಟನೆ ನೀಡಿ ಗುಡ್ಡೆ ಪ್ರದೇಶದಲ್ಲಿ ಕೆಂಪುಕಲ್ಲನ್ನು ತೆಗೆಯಲು ಜೆಸಿಬಿ ಮೂಲಕ ಜಾಗ ಗುರುತು ಮಾಡಿದ್ದಾರೆ ಎಂಬ ಸ್ಪಷ್ಟನೆ ದೊರೆತಿದ್ದು ಆತಂಕಗೊಂಡ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಯಿತು.
Kshetra Samachara
24/11/2020 08:07 pm